ಸಾಂವಿಧಾನಿಕ ಹೋರಾಟವನ್ನು ದಮನಿಸಲು ಪ್ರಯತ್ನಿಸುತ್ತಿರುವ ಯು.ಟಿ‌ ಖಾದರ್ ಗೆ ಈ.ಡಿ ಯ ಭಯ ಶುರುವಾಗಿದೆಯೇ: SDPI ಪ್ರಶ್ನೆ

Prasthutha|

ಮಂಗಳೂರು: ಹಿಜಾಬ್ ಗಾಗಿ ಹೋರಾಡುವ ವಿಧ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಿ ನೋಡಲಿ ಎಂಬ ಹೇಳಿಕೆ ನೀಡಿದ ಶಾಸಕ ಯು.ಟಿ.ಖಾದರ್ ರವರಿಗೆ ಜಾರಿ ನಿರ್ದೇಶನಾಲಯ (ED)ದ ಭಯ ಆವರಿಸಿದೆಯಾ ಎಂದು ಎಸ್‌ಡಿಪಿಐ ದ.ಕ ಜಿಲ್ಲಾದ್ಯಕ್ಷರಾದ ಅಬೂಬಕ್ಕರ್ ಕುಲಾಯಿ ಪ್ರಶ್ನಿಸಿದ್ದಾರೆ.

- Advertisement -

ಬಿಜೆಪಿ ಸರ್ಕಾರವೂ ತಮ್ಮ ವಿರುದ್ಧ ಧ್ವನಿ ಎತ್ತುವವರನ್ನು ಈಡಿಯನ್ನು ಕಳಿಸಿ ಬೆದರಿಸುವ ತಂತ್ರವನ್ನು ಮತ್ತು ಅಂತಹ ನಾಯಕರನ್ನು ತಮ್ಮ ಪಕ್ಷಕ್ಕೆ ಕರೆತರುವ ಯೋಜನೆಯನ್ನು ಹಾಕಿಕೊಂಡು ವಿರೋಧ ಪಕ್ಷದ ನಾಯಕರನ್ನು ಬ್ಲಾಕ್ ಮೇಲ್ ಮಾಡುತ್ತಾ ಬಂದಿದ್ದಾರೆ,ಅದೇ ರೀತಿ ಯೂ.ಟಿ.ಖಾದರ್ ರವರು ಕೂಡ ತಮ್ಮ ಆಸ್ತಿ ಪಾಸ್ತಿ ಗಳನ್ನು ರಕ್ಷಿಸಿಕೊಳ್ಳಲು ಹಿಜಾಬ್ ಧಾರಿಣಿ ವಿಧ್ಯಾರ್ಥಿನಿಯರ ಬಗ್ಗೆ ಬಿಜೆಪಿಯವರಂತೆ ಸಾಂವಿಧಾನಿಕ ವಿರೋಧಿ ಹೇಳಿಕೆಗಳನ್ನು ನೀಡಿ ಸಂಘಪರಿವಾರದ ನಾಯಕರ ಮೆಚ್ಚುಗೆ ಗಳಿಸಲು ಹವಣಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ದಲಿತರ, ಕ್ರೈಸ್ತರ ಹಾಗೂ ಪ್ರಮುಖವಾಗಿ ಮುಸ್ಲಿಮರ ವಿರುದ್ಧ ನಿರಂತರವಾಗಿ ದೌರ್ಜನ್ಯ, ಹಿಂಸೆ,ನ್ಯಾಯದಲ್ಲಿ ತಾರತಮ್ಯ,ತ್ರಿವಳಿ ತಲಾಕ್ ಹಿಜಾಬ್ ಸೇರಿದಂತೆ ಧಾರ್ಮಿಕ ನಂಬಿಕೆಗಳಲ್ಲಿ ಮೂಗು ತೂರಿಸುತ್ತಾ ವಿವಿಧ ರೀತಿಯ ದಬ್ಬಾಳಿಕೆಯನ್ನು ನಡೆಸಿಕೊಂಡು ಧಾರ್ಮಿಕ ಹಕ್ಕುಗಳನ್ನು ಹತ್ತಿಕ್ಕುವಂತಹ ಕೆಲಸಗಳನ್ನು ಮಾಡುತ್ತಿದೆ.

- Advertisement -

ಪ್ರಸ್ತುತ ಹಿಜಾಬ್ ದ್ವೇಷದ ವಿರುದ್ಧವಾಗಿ ವಿಧ್ಯಾರ್ಥಿನಿಯರು ನಿರಂತರವಾಗಿ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದಾರೆ,ಇದರ ಭಾಗವಾಗಿ ರಾಜ್ಯದ ಹಲವು ಕಡೆ ಹಲವಾರು ವಿದ್ಯಾರ್ಥಿನಿಯರು ಕೇಸ್ ಗೆ ಒಳಪಟ್ಟುಕೊಂಡು ಹಾಗೂ ಎಬಿವಿಪಿ ಸಂಘಪರಿವಾರದ ದೌರ್ಜನ್ಯ,ಅವಮಾನ ಸಹಿಸಿಕೊಂಡರೆ,ಎಬಿವಿಪಿ ಗೂಂಡಾಗಳು ಧ್ವೇಷ ಹಬ್ಬಿಸುವ ಉದ್ದೇಶದಿಂದ ಶಾಲೆಗೆ ಕೇಸರಿ ಶಾಲು ಹಾಕಿಕೊಂಡು ಬಂದು ವಿಧ್ಯಾ ದೇಗುಲಕ್ಕೆ ಕಲ್ಲು ಬಿಸಾಡಿ ದಾಳಿ ಮಾಡಿದಂತಹ ಘಟನೆ ಗಳು ನಡೆದಿದೆ.ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ಪಿಯುಸಿ ವರೆಗಿನ ವಿಧ್ಯಾರ್ಥಿನಿಯರ ಕುರಿತಾಗಿ ಮಾತ್ರ ವಾಗಿದ್ದು ಇದರ ವಿರುದ್ಧ ಕೂಡ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯ ನಡೆಯುತ್ತಿರುವ ವೇಳೆಯಲ್ಲಿ ಇದೀಗ ಸಂಘಪರಿವಾರದ ನಿರ್ದೇಶನದಂತೆ ಏಕಾಏಕಿ ಪದವಿ ಕಾಲೇಜ್ ನಲ್ಲಿ ಕೂಡ ಹಿಜಾಬ್ ಗೆ ನಿರ್ಬಂದ ವಿಧಿಸಿದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಶಾಸಕರಾದ ಯು.ಟಿ ಖಾದರ್ ರವರು ಸಂವಿಧಾನ ಬದ್ದ ಮತ್ತು ಧಾರ್ಮಿಕ ಹಕ್ಕಾದ ಹಿಜಾಬ್ ವಿಧ್ಯಾರ್ಥಿನಿಯರ ಪರವಾಗಿ ಧ್ವನಿ ಎತ್ತದೆ ಅದರ ವಿರುದ್ಧವಾಗಿ ಹೇಳಿಕೆ ಕೊಡುತ್ತಿರುವುದು ಖಂಡನಾರ್ಹ ವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp