ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವ್ಯಾಪ್ತಿಯ ಪ್ರತಿನಿಧಿಗಳ ಸಭೆ ಹಾಗೂ ಆಂತರಿಕ ಚುನಾವಣೆಯು ಟ್ರಿನಿಟಿ ಹಾಲ್ ಪಡೀಲ್, ಪುತ್ತೂರಿನಲ್ಲಿ ನಡೆಯಿತು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್‌ರವರು ಧ್ವಜಾರೋಹಣಗೈದು ಪ್ರತಿನಿಧಿ ಸಭೆಗೆ ಚಾಲನೆ ನೀಡಿದರು. ಚುನಾವಣಾಧಿಕಾರಿಯಾಗಿ ಆಗಮಿಸಿದ ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರು ನಾಯಕತ್ವದ ಬಗ್ಗೆ ತರಬೇತಿಯನ್ನು ನೀಡಿದರು. ಎಸ್ಡಿಪಿಐ ಪುತ್ತೂರು ಕಾರ್ಯದರ್ಶಿಗಳಾದ ಉಸ್ಮಾನ್ ಎ.ಕೆ ಹಾಗೂ ರಿಯಾಝ್ ಬಳಕ್ಕರವರು ತ್ರೈವಾರ್ಷಿಕ ವರದಿ ವಾಚಿಸಿದರು.
ಮುಂದಿನ ಪಕ್ಷದ ಬೆಳವಣಿಗೆಗಳ ಬಗ್ಗೆ, ಪ್ರಸ್ತುತವಾಗಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ನಂತರ ಮುಂದಿನ ಮೂರು ವರ್ಷದ ಅವಧಿಗೆ ನೂತನ ನಾಯಕರನ್ನು ಆಂತರಿಕ ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಸಿದ್ದೀಕ್ ಪುತ್ತೂರು, ಉಪಾಧ್ಯಕ್ಷರಾಗಿ ಅಶ್ರಫ್ ಬಾವು, ಕಾರ್ಯದರ್ಶಿಯಾಗಿ ಉಸ್ಮಾನ್ ಎ.ಕೆ, ಜೊತೆ ಕಾರ್ಯದರ್ಶಿಯಾಗಿ ರಹೀಂ ಪುತ್ತೂರು, ಕೋಶಾಧಿಕಾರಿಯಾಗಿ ಹಮೀದ್ ಸಾಲ್ಮಾರ ಹಾಗೂ ಸಮಿತಿ ಸದಸ್ಯರಾಗಿ ಇಬ್ರಾಹಿಂ ಸಾಗರ್, ಸಿರಾಜ್ ಕೂರ್ನಡ್ಕ, ಜುನೈದ್ ಸಾಲ್ಮರ, ಶಾಕಿರ್ ಅಳಕೆಮಜಲು, ವಿಶ್ವನಾಥ ಪುಣ್ಚತ್ತಾರು , ಉಮ್ಮರ್ ಕೂರ್ನಡ್ಕ ಆಯ್ಕೆಯಾದರು. ಸಭೆಯಲ್ಲಿ ಎಸ್ಡಿಪಿಐ ದ.ಕ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಜಿಲ್ಲಾ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ ಮತ್ತು ಅಶ್ರಫ್ ತಲಪಾಡಿ, ವಿಮ್ ಪುತ್ತೂರು ಅಧ್ಯಕ್ಷೆ ಝಾಹಿದಾ ಸಾಗರ್ ಹಾಗೂ ಪುತ್ತೂರು ಕ್ಷೇತ್ರ ವ್ಯಾಪ್ತಿಯ ಬ್ಲಾಕ್ ಮತ್ತು ನಗರ ಸಮಿತಿ ಪದಾಧಿಕಾರಿಗಳು, ಎಸ್ಡಿಪಿಐ ಬೆಂಬಲಿತ ನಗರಸಭಾ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.