ಎಸ್‌’ಡಿಪಿಐ ಪುತ್ತೂರು ನಗರ ಸಮಿತಿ ವತಿಯಿಂದ ಬೂತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆ

Prasthutha|

ಪುತ್ತೂರು: ರಾಜ್ಯಾದ್ಯಂತ ಎಸ್‌’ಡಿಪಿಐ ವತಿಯಿಂದ ಆಯೋಜಿಸಿರುವ ಬೂತ್ ಜೋಡೋ ಅಭಿಯಾನದ ಭಾಗವಾಗಿ ಎಸ್‌’ಡಿಪಿಐ ಪುತ್ತೂರು ನಗರ ಸಮಿತಿ ವತಿಯಿಂದ ಅಭಿಯಾನದ ಪೂರ್ವಭಾವಿ ಸಭೆ ಪುತ್ತೂರು ಕಚೇರಿಯಲ್ಲಿ ನಡೆಯಿತು.

- Advertisement -

ಸಭೆಯಲ್ಲಿ ಬೂತ್ ಜೋಡೋ ಅಭಿಯಾನವನ್ನು ಯಶಸ್ವಿಗೊಳಿಸುವ ಬಗ್ಗೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಎಸ್‌’ಡಿಪಿಐ ಪುತ್ತೂರು ವಿಧಾನಸಭಾ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ನಗರ ಸಮಿತಿ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ಕಾರ್ಯದರ್ಶಿ ಸಜ್ಜಾದ್ ಮುರ, ಕ್ಷೇತ್ರ ಸಮಿತಿ ಕೋಶಾಧಿಕಾರಿ ಯೆಹ್ಯಾ ಕೂರ್ನಡ್ಕ ಹಾಗೂ ನಗರ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Join Whatsapp