ಪ್ರವಾದಿ ಮುಹಮ್ಮದ್(ಸ. ಅ)ರ ಬಗ್ಗೆ ಅವಹೇಳನ: SDPI ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4 ಕಡೆಗಳಲ್ಲಿ ಪ್ರತಿಭಟನೆ

Prasthutha|

ಸುಳ್ಯ: ಪ್ರವಾದಿ ಮುಹಮ್ಮದ್(ಸ. ಅ)ರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ರಾಷ್ಟ್ರೀಯ ವಕ್ತಾರುಗಳಾದ ನೂಪುರ್ ಶರ್ಮ ಮತ್ತು ನವೀನ್ ಜಿಂದಾಲ್ ರ ಶೀಘ್ರ ಬಂಧನಕ್ಕೆ ಒತ್ತಾಯಿಸಿ SDPI ಸುಳ್ಯ ವಿಧಾನಸಭಾ ವ್ಯಾಪ್ತಿಯ ಕಲ್ಲುಗುಂಡಿ,ಪೈಚಾರ್, ಬೆಳ್ಳಾರೆ,ಹಾಗೂ ಸವಣೂರಿನಲ್ಲಿ ಪ್ರತಿಭಟನೆ ಪ್ರತಿಭಟನೆ ನಡೆಯಿತು.

- Advertisement -

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭಾಷಣಗಾರರು ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ರವರನ್ನು ಹೀನಾಯವಾಗಿ ನಿಂದಿಸಿ ಧರ್ಮಗಳ ನಡುವೆ ದ್ವೇಷವನ್ನು ಹರಡಿ ಭಾರತ ದೇಶ ಪ್ರಪಂಚದಲ್ಲಿ ತಲೆತಗ್ಗಿಸುವಂತೆ ಮಾಡಲು ಕಾರಣಕರ್ತರಾದ ನೂಪುರ್ ಶರ್ಮ ಹಾಗೂ ನವೀನ್ ಜಿಂದಾಲ್ ರವರನ್ನು ಪಕ್ಷದಿಂದ ವಜಾ ಮಾಡಿದರೆ ಸಾಲದು,ಕಠಿಣ ಕಾನೂನಿನ ಮೂಲಕ ಬಂಧಿಸಿ ಜೈಲಿಗೆ ಅಟ್ಟಬೇಕೆಂದು ಆಗ್ರಹಿಸಿದರು.

ಇದೇ ವೇಳೆ ವಿಟ್ಲದಲ್ಲಿ ಹಿಂಜಾವೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವಮಾನಕವಾಗಿ ಮಾತನಾಡಿದ ರಾಧಾಕೃಷ್ಣ ನ ವಿರುದ್ಧ 153(A) ಪ್ರಕಾರ ಪ್ರಕರಣ ದಾಖಲಿಸದೆ ಲಘು ಸೆಕ್ಷನ್ ಹಾಕಿದ ಪೋಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿದ ನಾಯಕರು ಇದೊಂದು ಕಣ್ಣೊರೆಸುವ ತಂತ್ರ ಮಾತ್ರ,ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೋರಾಟ ವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

- Advertisement -

ಸವಣೂರಿನಲ್ಲಿ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ,ಬೆಳ್ಳಾರೆಯಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ,ಪೈಚಾರ್ ನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಹಮೀದ್ ಸಾಲ್ಮರ,ಹಾಗೂ ಕಲ್ಲುಗುಂಡಿಯಲ್ಲಿ ರಿಯಾಝ್ ಬಳಕ್ಕ,ಹಾಗೂ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ರಫೀಕ್ ಎಂ.ಎ, ಸವಣೂರು ಬ್ಲಾಕ್ ಅಧ್ಯಕ್ಷ ಯೂಸುಫ್ ಹಾಜಿ ಬೇರಿಕೆ,ಕಾರ್ಯದರ್ಶಿ ಶರೀಫ್ ಗುತ್ತಿಗೆ,ಸವಣೂರು ಗ್ರಾ.ಪಂ ಸದಸ್ಯ ಅಬ್ದುಲ್ ರಝ್ಝಾಕ್ ಕೆನರಾ,ಗ್ರಾಮ ಸಮಿತಿ ಕಾರ್ಯದರ್ಶಿ ರಫೀಕ್ ಪಲ್ಲತಮೂಲೆ
ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ಹಮೀದ್ ಮರಕ್ಕಡ,ಕಾರ್ಯದರ್ಶಿ ನೌಫಲ್ ಟಿ.ಎ,ಸುಳ್ಯ ರೂರಲ್ ಅಧ್ಯಕ್ಷ ಆಬಿದ್ ಪೈಚಾರ್ ಕಾರ್ಯದರ್ಶಿ ಮುನೀರ್ ಶೈನ್, ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಹಮೀದ್ ಅಡ್ಕಾರ್,ಉವೈಸ್,ಸಂಪಾಜೆ ಗ್ರಾಮ ಸಮಿತಿಯ ಕಾರ್ಯದರ್ಶಿ ಶರೀಫ್ ಸೆಟ್ಯಡ್ಕ,ಸುಳ್ಯ ರೂರಲ್ ಬ್ಲಾಕ್ ಉಪಾಧ್ಯಕ್ಷ ಸಲೀಂ ದರ್ಕಾಸ್ ,ಸೇರಿದಂತೆ ಗ್ರಾಮ ಸಮಿತಿ ಮತ್ತು ಬೂತ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.



Join Whatsapp