ಕೇಂದ್ರದ ಬಿಜೆಪಿ ಸರ್ಕಾರದ ರೈತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಯ ವಿರುದ್ಧ SDPI ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪ್ರತಿಭಟನೆ

Prasthutha|

ಮಂಗಳೂರು : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿದ ರೈತ ಮತ್ತು ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಯನ್ನು ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ  ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಪ್ರತಿಭಟನಾ ಸಭೆ ನಡೆಸಿತು.

- Advertisement -

ಪ್ರತಿಭಟನೆಯು ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ, ಬೆಳ್ಳಾರೆ, ಸವಣೂರು, ಅಂಕತ್ತಡ್ಕ, ಪುತ್ತೂರು ವಿಧಾನಸಭಾ ಕ್ಷೇತ್ರದ  ಕಬಕ, ಕುಂಬ್ರ, ಆರ್ಯಾಪು, ಪುರುಷರಕಟ್ಟೆ, ವಿಟ್ಲ, ಉಪ್ಪಿನಂಗಡಿ, ಪುಣಚ,  ಕಡಬ ತಾಲೂಕಿನ ಕಡಬ,ನೆಲ್ಯಾಡಿ,ರಾಮುಕುಂಜ,ಕೊಯಿಲ,  ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಸಿ ರೋಡ್, ಸಜಿಪಮೂಡ, ವಿಟ್ಲ ಪಡ್ನೂರು, ಕಲ್ಲಡ್ಕ,ಕಾವಲ್ ಮುಡೂರು, ಇರ್ವತ್ತೂರು, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಜ್ಪೆ ಮತ್ತು ಮುಲ್ಕಿಯಲ್ಲಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಲಾಯಿಲ, ಮಡಂತ್ಯಾರ್, ಪುದುವೆಟ್ಟು, ಕುವೆಟ್ಟು, ನೆರಿಯಾ, ನಾವೂರು, ಕುದ್ರಡ್ಕ, ಧರ್ಮಸ್ಥಳ, ತೆಕ್ಕಾರ್, ಮಳವಂತಿಗೆ, ಮಿತ್ತಬಾಗಿಲು,ಇಂದಬೆಟ್ಟು, ಉಳ್ಳಾಲ ವಿಧಾನಸಭಾ ಕ್ಷೇತ್ರದ ಪುದು ಪರಂಗಿಪೇಟೆ, ಉಳ್ಳಾಲ, ತಲಪಾಡಿ, ಹರೇಕಳ, ಕಿನ್ಯಾ, ಬೋಳಿಯಾರ್, ಸಜಿಪ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಉಳಾಯಿಬೆಟ್ಟು,ಮೂಡುಶೆಡ್ಡೆ,ಮಲ್ಲೂರು,ಸುರತ್ಕಲ್, ಕಾವೂರು, ಅಡ್ಯಾರ್ ಅರ್ಕುಳ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಗಳೂರು ತಾಲೂಕು ಕಛೇರಿ ಸೇರಿದಂತೆ ಸುಮಾರು 50 ಕ್ಕೂ ಅಧಿಕ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು ಮತ್ತು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಾಯಕರುಗಳು ಕೇಂದ್ರ ಸರ್ಕಾರವು ಬಂಡವಾಳ ಶಾಹಿಗಳನ್ನು ಬೆಳೆಸುವ ಉದ್ದೇಶದಿಂದ ನಮ್ಮ ದೇಶದ ಬೆನ್ನೆಲುಬಾಗಿರುವ ರೈತರ ಪರವಾಗಿದ್ದ ಕೃಷಿ ಮಸೂದೆಗಳನ್ನು ತಿದ್ದುಪಡಿ ಮಾಡುವ ಮೂಲಕ ದೇಶವನ್ನೇ ಅಧಃಪತನದತ್ತ ಕೊಂಡೊಯ್ಯುತ್ತಿದ್ದಾರೆ. ಬಂಡವಾಳ ಶಾಹಿ ಮತ್ತು ಸರ್ಕಾರದ ನಡುವೆ ಅಪವಿತ್ರ ಮೈತ್ರಿ ಮಾಡಿಕೊಂಡು ದೇಶದ ಜನತೆಯನ್ನು ಬಂಡವಾಳ ಶಾಹಿಗಳ ಗುಲಾಮರನ್ನಾಗಿ ಮಾಡಿಸುತ್ತದೆ. ರೈತರು ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರಗಳು ರೈತರ ಅಭಿವೃದ್ಧಿ ಕಡೆಗೆ ಯೋಚಿಸದೆ ಅವರನ್ನು ಇನ್ನಷ್ಟು ಅಧಿಕ ಸಂಕಷ್ಟಗಳ ತಳ್ಳಲು ಮುಂದಾಗುರುವುದು ದೇಶದ ದುರಂತವೇ ಸರಿ ಎಂದು ಹೇಳಿದ್ದಾರೆ.

- Advertisement -

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರಾಷ್ಟ್ರಪತಿ ಮಧ್ಯಪ್ರವೇಶ ಮಾಡಿ ತಡೆಯಾಜ್ಞೆ ತಂದು ಹಿಂಪಡೆಯಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಇಂತಹ ಜನವಿರೋದಿ ಕಾಯ್ದೆಗಳ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ನಡೆಸಲಾಗುವುದೆಂದು ಎಸ್‌ಡಿಪಿಐ ಮುಖಂಡರು ತಿಳಿಸಿದರು. ಪ್ರತಿಭಟನಾ ಸಭೆಯ ನಂತರ ಅಯಾಯ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ  ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ ರಾಜ್ಯ, ಜಿಲ್ಲಾ,ವಿಧಾನಸಭಾ ಕ್ಷೇತ್ರದ ಮತ್ತು ಸ್ಥಳೀಯ ಗ್ರಾಮ ಮಟ್ಟದ ನಾಯಕರುಗಳು ಉಪಸ್ಥಿತರಿದ್ದರು.

Join Whatsapp