ಸರ್ಕಾರಿ ಬಸ್ ಮೇಲೆ ಸಾವರ್ಕರ್ ಚಿತ್ರ ಅಂಟಿಸಿದ್ದಕ್ಕೆ SDPI ಆಕ್ಷೇಪ; ಫೋಟೋ ತೆರವು

Prasthutha|

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಮೇಲೆ ಸಾವರ್ಕರ್ ಚಿತ್ರ ಅಂಟಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಚಿಕ್ಕೋಡಿ ಮತ್ತು ಯಡೂರ ಮಾರ್ಗದ ಮಧ್ಯೆ ಸಂಚರಿಸುವ ಸರ್ಕಾರಿ ಬಸ್ ಮೇಲೆ ಸಾವರ್ಕರ್ ಚಿತ್ರ ಅಂಟಿಸಿದ್ದಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಆಕ್ಷೇಪ ವ್ಯಕ್ತಪಡಿಸಿದೆ.

- Advertisement -

KA 23 F 904 ಸಂಖ್ಯೆಯ ಚಿಕ್ಕೋಡಿ – ಯಡೂರ ಮಾರ್ಗಮಧ್ಯ ಸಂಚರಿಸುವ ಬಸ್ ಮೇಲೆ ಸಾವರ್ಕರ್ ಚಿತ್ರ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಡಿಪೋಗೆ ಸೇರಿದ NWKRTC ಬಸ್ ಇದಾಗಿದೆ.

ಫೋಟೋ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಆಗಸ್ಟ್ 15 ರಂದು ಟ್ವೀಟ್ ಮಾಡಿದ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಸರ್ಕಾರಿ ಬಸ್ಸುಗಳ ಮೇಲೆ ವಿವಾದಾತ್ಮಕ ವ್ಯಕ್ತಿಗಳ ಫೋಟೋ ಹಾಕುವುದು ಎಷ್ಟು ಸರಿ? ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ, ಬ್ರಿಟೀಷರೊಂದಿಗೆ ರಾಜಿ ಮಾಡಿಕೊಂಡ ಸ್ವಯಂ ಘೋಷಿತ “ವೀರ” ಸಾವರ್ಕರ್ ಈ ಚಿತ್ರ ಚಿಕ್ಕೋಡಿ ಬಸ್ಸುಗಳಲ್ಲಿ ಬಳಸುವುದು ಸ್ವಾತಂತ್ರ್ಯ ಸೇನಾನಿಗಳಿಗೆ ಮಾಡುವ ಅವಮಾನವಲ್ಲವೇ? ಎಂದು ಬರೆದುಕೊಂಡಿದ್ದಾರೆ.

- Advertisement -

ಅಫ್ಸರ್ ಕೊಡ್ಲಿಪೇಟೆ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ, ಮುಂದಿನ ಪರಿಶೀಲನೆಗೆ NWKRTCಗೆ ವರ್ಗಾಯಿಸುತ್ತೇವೆ ಎಂದು ಹೇಳಿತ್ತು. ಸದ್ಯ ಆ ಬಸ್​ನಲ್ಲಿ ಫೋಟೋ ತೆರವು ಮಾಡಲಾಗಿದೆ ಎಂದು ತಿಳಿದುಬಂದಿದೆ.

Join Whatsapp