ಬೆಂಗಳೂರು: ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಮಹಿಳೆಯರ ಅವಹೇಳನ ಮಾಡಿದ ಮಾಜಿ ಸಿಎಂ ಹೇಳಿಕೆಗೆ SDPI ಕಿಡಿಗಾರಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್,
ಮಾನ್ಯ ಹೆಚ್.ಡಿ ಕುಮಾರಸ್ವಾಮಿಯವರೇ,
ನಿಮ್ಮಂತ ನಾಯಕರಿಗೆ ಇಂತಹ ಮಾತು ಶೋಭೆಯಲ್ಲ. ಹಳ್ಳಿಯ ಬಡ /ಮಧ್ಯಮ ವರ್ಗದ ಹೆಣ್ಣುಮಕ್ಕಳ ಕಷ್ಟ, ಬವಣೆ ಮತ್ತು ಮನೆ ನಡೆಸಲು ಅವರು ಕಷ್ಟ ಪಡುವ ರೀತಿ ನಿಮಗೆ ಗೊತ್ತಿಲ್ಲ? ನೀವು ಈ ಹೆಣ್ಣು ಮಕ್ಕಳ ಬವಣೆಗೆ ಕಣ್ಣಾಗಬೇಕು ಮತ್ತು ಕಿವಿಯಾಗಬೇಕು. ನೀವೊಬ್ಬ ನೈಜ ಜನನಾಯಕರಾದರೆ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ಸರ್ವೆ ನಡೆಸಿ ಆಮೇಲೆ ಟೀಕೆ ಟಿಪ್ಪಣಿ ಮಾಡಿ ಎಂದು ಹೇಳಿದ್ದಾರೆ.