ಕುಂಬಳೆ : ಅಭಿವೃದ್ಧಿ ವಿಷಯದಲ್ಲಿ ಶತಮಾನಗಳಿಂದಲೂ ನಿರಂತರವಾಗಿ ನಿರ್ಲಕ್ಷಿಸಲ್ಪಡುತ್ತಿರುವ ಕುಂಬಳೆ ರೈಲ್ವೇ ನಿಲ್ದಾಣದ ಉನ್ನತೀಕರಣಕ್ಕೆ ಸರಕಾರ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಅಭಿವೃದ್ಧಿ ಔದಾರ್ಯವಲ್ಲ; ಬದಲಾಗಿ ಜನ ಸಾಮಾನ್ಯರ ಹಕ್ಕು ಎಂದು ಅಶ್ರಫ್ ಬಡಾಜೆ ಹೇಳಿದರು.
ಕುಂಬಳೆ ರೈಲ್ವೇ ನಿಲ್ದಾಣದ ವಿಷಯದಲ್ಲಿ ಎಸ್.ಡಿ.ಪಿ.ಐ ಕುಂಬಳೆ ಪಂಚಾಯತ್ ಸಮಿತಿ ಆಯೋಜಿಸಿದ ಪ್ರತಿಭಟನಾ ಧರಣಿ ಉದ್ಘಾಟನೆಗೈದು ಮಾತನಾಡುತ್ತಿದ್ದರು.
ಮುಂಗಡ ಕಾಯ್ದಿರಿಸುವಿಕೆ ಕೌಂಟರ್ ತೆರೆಯಲು ಹಾಗೂ ದೀರ್ಘಾವಧಿ ಪ್ರಯಾಣದ ರೈಲುಗಳಿಗೆ ನಿಲುಗಡೆ ಅಂಗೀಕರಿಸುವಿಕೆ ಸ್ಥಳೀಯರ ಹಿಂದಿನಿಂದಲೂ ಕೇಳಿ ಬರುತ್ತಿರುವ ಬೇಡಿಕೆಯಾಗಿದೆ. ಸಹಿ ಸಂಗ್ರಹಿಸುವಿಕೆ ಹಾಗೂ ಧರಣಿಯಲ್ಲಿ ವಿದ್ಯಾರ್ಥಿಗಳು , ಪ್ರಯಾಣಿಕರು ಮತ್ತು ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಎಸ್.ಡಿ.ಪಿ.ಐ ಕುಂಬಳೆ ಪಂಚಾಯತ್ ಕಾರ್ಯದರ್ಶಿ ಮುಝಮ್ಮಿಲ್ ಪೆರ್ವಾಡ್ ಸ್ವಾಗತಿಸಿ ಸಮಿತಿ ಅಧ್ಯಕ್ಷ ನಾಸರ್ ಬಂಬ್ರಾಣ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ, ಮಂಡಲ ಕಾರ್ಯದರ್ಶಿ ಶರೀಫ್ ಪಾವೂರ್ ಹಾಗೂ ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಅನ್ವರ್ ಆರಿಕ್ಕಾಡಿ ಧರಣಿಯನ್ನುದ್ದೇಶಿಸಿ ಮಾತನಾಡಿದರು. ಅಶ್ರಫ್ ಅಝ್ಹರಿ ವಂದಿಸಿದರು.
ಅಭಿವೃದ್ಧಿ ಔದಾರ್ಯವಲ್ಲ, ಜನಸಾಮಾನ್ಯರ ಹಕ್ಕು : ಅಶ್ರಫ್ ಬಡಾಜೆ
Prasthutha|
- Advertisement -