ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ಪ್ರತಿನಿಧಿಗಳ ಸಭೆ, ನೂತನ ಸಮಿತಿ ರಚನೆ

Prasthutha|

►ಅಧ್ಯಕ್ಷರಾಗಿ ಅಕ್ಬರ್ ರಾಝ ಆಯ್ಕೆ

- Advertisement -

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ 2021-2024 ಸಾಲಿನ ಮಧ್ಯಂತರ ಕ್ಷೇತ್ರ ಪ್ರತಿನಿಧಿಗಳ ಸಭೆಯು ಹಂಗಾಮಿ ಅಧ್ಯಕ್ಷರಾದ ಅಕ್ಬರ್ ರಾಝ ರವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ದ.ಕ ಜಿಲ್ಲಾ ಡಿ ವರ್ಗ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಿತು.

ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆಯವರು ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆಯನ್ನು ನೇತೃತ್ವ ವಹಿಸಿ ನಡೆಸಿಕೊಟ್ಟರು.

- Advertisement -

2021-2023ರ ಪಕ್ಷದ ಬಲವರ್ಧನೆ, ಕ್ಷೇತ್ರ ವ್ಯಾಪ್ತಿಯ ಪಕ್ಷದ ಚಟುವಟಿಕೆಯ ಬಗ್ಗೆ ಪ್ರತಿನಿಧಿಗಳು ಮುಂದಿಟ್ಟು ಕಳೆದ ಎರಡೂವರೆ ವರ್ಷಗಳಿಂದ ಪಕ್ಷದ ಕಾರ್ಯಚಟುವಟಿಕೆಯ ಬಗ್ಗೆ ವರದಿಯನ್ನು ಮಂಡಿಸಲಾಯಿತು.

ಕಾರಣಾಂತರಗಳಿಂದ ತೆರವಾಗಿದ್ದ ಸ್ಧಾನಕ್ಕೆ ಆಂತರಿಕ ಚುನಾವಣೆಯ ಮೂಲಕ ಕ್ಷೇತ್ರದ  ಸಮಿತಿಯನ್ನು ಪುನರ್ ರಚಿಸಲಾಯಿತು.

ಈ ಮೂಲಕ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಅಕ್ಬರ್ ರಾಝ, ಉಪಾಧ್ಯಕ್ಷರಾಗಿ ಸಿದ್ದೀಕ್ ಬೆಂಗರೆ, ಕಾರ್ಯದರ್ಶಿಯಾಗಿ ಅಶ್ಫಾಕ್ ಪಾಂಡೇಶ್ವರ, ಜೊತೆ ಕಾರ್ಯದರ್ಶಿಯಾಗಿ ವಾಜೀದ್ ಕಂದಕ್, ಕೋಶಾಧಿಕಾರಿಯಾಗಿ ಇಬ್ರಾಹಿಮ್ ದುಬಾಲ್ ಹಾಗೂ ಸಮಿತಿ ಸದಸ್ಯರಾಗಿ ಶರೀಫ್ ಪಾಂಡೇಶ್ವರ, ಬಶೀರ್ ಬಜಾಲ್, ಇಮ್ತಿಯಾಝ್ ಡಿ.ಎಕ್ಸ್ ಬೆಂಗರೆಯವರು ಆಯ್ಕೆಯಾದರು.

ಸಭೆಯಲ್ಲಿ SDPI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಕ್ಷೇತ್ರ ವ್ಯಾಪ್ತಿಯ ವಾರ್ಡ್ ಪದಾಧಿಕಾರಿಗಳು, ಕ್ಷೇತ್ರ ಸಮಿತಿಯ ನಾಯಕರು ಈ ಸಂದರ್ಭದಲ್ಲಿ ಉಪಸ್ಧಿತರಿದ್ದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಉಪಾದ್ಯಕ್ಷರಾದ ಸಿದ್ದೀಕ್ ಬೆಂಗರೆರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಶೀರ್ ಬಜಾಲ್ ರವರು ಧನ್ಯವಾದಗೈದರು.



Join Whatsapp