SDPI ಮಂಗಳೂರು ವಿಧಾಸಭಾ ಕ್ಷೇತ್ರದ ಸಮಾವೇಶ: ನೂರಾರು ಮಂದಿ ಪಕ್ಷ ಸೇರ್ಪಡೆ

Prasthutha|

ಉಳ್ಳಾಲ: ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ಸಮಿತಿ ವ್ಯಾಪ್ತಿಯ ಪಕ್ಷ ಸಮಾವೇಶವು ಫೆಬ್ರವರಿ 23ರಂದು ಕಲ್ಲಾಪು ಯುನಿಟಿ ಹಾಲ್‌ನಲ್ಲಿ ನಡೆಯಿತು. ಈ ವೇಳೆ SDPI ಪಕ್ಷದ ತತ್ವ ಸಿದ್ದಾಂತ ಒಪ್ಪಿಕೊಂಡು ನೂರಾರು ಯುವಕರು ನಾಯಕರ ಸಮ್ಮುಖದಲ್ಲಿ ಪಕ್ಷ ಸೇರಿದರು.

- Advertisement -

ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿದ್ದ SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ದೇಶದ ಆಡಳಿತ ವ್ಯವಸ್ಥೆಯು ಸರ್ವಾಧಿಕಾರಿ ಮನೋಭಾವದಿಂದ ಕೂಡಿದ್ದು, ಎಲ್ಲವನ್ನು ಇಲ್ಲದಾಗಿಸುವ ಪ್ರಯತ್ನ ಸಂಘ ಪರಿವಾರದಿಂದ ನಡೆಯುತ್ತಿದೆ. ಅದನ್ನು ಹಿಮ್ಮೆಟ್ಟಿಸಲು ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಎಲ್ಲರಿಗೂ ಎಸ್ ಡಿ ಪಿ ಪಕ್ಷದ ಬಾಗಿಲು ಯಾವತ್ತೂ ತೆರೆದಿದ್ದು, ಯಾವುದೇ ಅಂಜಿಕೆಯಿಲ್ಲದೇ ನಮ್ಮ ಪಕ್ಷವನ್ನು ಸೇರಬಹುದು ಎಂದು ಕರೆ ಕೊಟ್ಟರು.

SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, ಸಂಘ ಪರಿವಾರ ಪ್ರೇರಿತ ಬಿಜೆಪಿ ಸರಕಾರ ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವಾಗ, ಮಸೀದಿಗಳ ಒಳಗೆ ಮಂದಿರವನ್ನು ಹುಡುಕುತ್ತಿರುವಾಗ, ಧರ್ಮಗಳ ನಡುವೆ ದ್ವೇಷ ಹರಡುತ್ತಿರುವಾಗ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಭರವಸೆ ಕಳೆದುಕೊಳ್ಳುತ್ತಿರುವಾಗ, ಮಾಧ್ಯಮಗಳು ಕೇಂದ್ರದ ಗುಲಾಮಗಿರಿಯನ್ನು ಮಾಡುತ್ತಿರುವಾಗ, ವಿರೋಧ ಪಕ್ಷಗಳು ನಪುಂಸಕತ್ವ ತೋರುತ್ತಿರುವಾಗ ಉಳಿದಿರುವ ನಂಬಿಕೆ ಹಾಗೂ ಭರವಸೆ ಕೇವಲ ಎಸ್ ಡಿ ಪಿ ಐ ಪಕ್ಷ ಮಾತ್ರ ಎಂದು ಹೇಳಿದರು.

- Advertisement -

SDPI ಕ್ಷೇತ್ರ ಉಪಾಧ್ಯಕ್ಷ ಫಾರೂಕ್ ಝಲ್ ಝಲ್ ಸಮಾವೇಶದ ಅದ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಾವೇಶದಲ್ಲಿ SDPI ರಾಜ್ಯ ಸಮಿತಿ ಸದಸ್ಯ ನವಾಝ್ ಉಳ್ಳಾಲ್ , ಜಿಲ್ಲಾ ಸಮಿತಿ ಸದಸ್ಯ ನಝೀರ್ ಪುದು , ಅಬೂಬಕ್ಕರ್ ಮದ್ದ, ಮಂಗಳೂರು ವಿಧಾನಸಭಾ ಕ್ಷೇತ್ರ ಕೋಶಾಧಿಕಾರಿ ರೌಫ್ ಉಳ್ಳಾಲ್, ಮಂಜನಾಡಿ ಬ್ಲಾಕ್ ಅಧ್ಯಕ್ಷ ನೌಶಾದ್ ಕಲ್ಕಟ್ಟ, ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ SN ಇಕ್ಬಾಲ್ , ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಟಿ ಇಸ್ಮಾಯಿಲ್, ಸಜೀಪನಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಬಿತಾ ಡಿ ಸೋಜಾ ಸೇರಿದಂತೆ ಹಲವು ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಸ್ವಾಗತಿಸಿ, ಅಬ್ದುಲ್ ರಹ್ಮಾನ್ ಬೋಳಿಯಾರ್ ಕಾರ್ಯಕ್ರಮ ನಿರೂಪಿಸಿದರು. SM ಬಶೀರ್ ಧನ್ಯವಾದ ಸಮರ್ಪಿಸಿದರು.



Join Whatsapp