ರೈತ ವಿರೋಧಿ ಕಾನೂನಿನ ವಿರುದ್ದ ಪ್ರತಿಭಟನೆ: ಎಸ್.ಡಿ.ಪಿ.ಐ ನಾಯಕರ ಬಂಧನ, ಬಿಡುಗಡೆ

Prasthutha|

ಬೆಂಗಳೂರು: ಸುಗ್ರೀವಾಜ್ಞೆಗಳ ಮೂಲಕ  ರೈತ, ದಲಿತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು  ಜಾರಿಗೆ ತರುತ್ತಿರುವ ಬಿಜೆಪಿ ಸರಕಾರದ ವಿರುದ್ಧ  ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಸ್.ಡಿ.ಪಿ.ಐ ಒಳಗೊಂಡಂತೆ ಐಕ್ಯಹೋರಾಟ ಸಮಿತಿ ಹೋರಾಟಗಾರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.

- Advertisement -

ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೇಟೆ, ಅಶ್ರಫ್ ಮಾಚಾರ್, ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್ ಗೂಳಾರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ತಾಹಿರ್ ಹುಸೇನ್,  ಆಮ್ಆದ್ಮಿ ಪಕ್ಷದ ಅಯೂಬ್ ಖಾನ್, ಸಾಮಾಜಿಕ ಕಾರ್ಯಕರ್ತ ಮಮತಾ ಹಾಗೂ ಇನ್ನೂ ಹಲವಾರು ರೈತ, ದಲಿತ, ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಬಂಧಿಸಿ ಪೊಲೀಸರು ಕಾಡುಗುಡಿ ಡಿ.ಆರ್.ಕ್ವಾಟ್ರಸ್ ನಲ್ಲಿ ಬಂಧನದಲ್ಲಿಟ್ಟಿದ್ದರು.

ಈ ವೇಳೆ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಪಾಶ, “ಒಂದು ವೇಳೆ ಅನ್ನದಾತ ಬೆವರು ಸುರಿಸಿ ಹೊಲದಲ್ಲಿ ದುಡಿಯದೇ ಹೋದರೆ ಟಾಟಾ ಬಿರ್ಲಾ ಅಂಬಾನಿಗಳ‌ ಮೊಬೈಲ್ ಚಿಪ್ ತಿಂದು ಬದುಕುವುದಕ್ಕೆ ಸಾಧ್ಯವಿದೆಯೇ? ರೈತರು ಬದುಕುಳಿಯದೇ ಹೋದರೆ ಇಡೀ ದೇಶವೇ ಸತ್ತು ಹೋಗಬೇಕಾಗುತ್ತದೆ. ನಾವು ಲೂಟಿ, ದರೋಡೆ ಮಾಡಿ ಬಂದಿಸಲ್ಪಟ್ಟಿಲ್ಲ ಎಂಬುದನ್ನು ಪೊಲೀಸರು ಅರ್ಥ ಮಾಡಿಕೊಳ್ಳಲಿ. ನಾವು ಹೋರಾಟದಲ್ಲೇ ಇರುತ್ತೇವೆ ಮತ್ತು ಹೋರಾಟದಿಂದ ಹಿಂದೆ ಸರಿಯಲಾರೆವು” ಎಂದು ಅವರು ಹೇಳಿದರು.

- Advertisement -

ಈ ವೇಳೆ ಐದು ಬಸ್ ಗಳಲ್ಲಿ 300ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು, ನಂತರ ಬಿಡುಗಡೆಗೊಳಿಸಲಾಗಿದೆ.

Join Whatsapp