ಕಾಪು ಪುರಸಭೆಯಲ್ಲಿ ನಮ್ಮ ಗೆಲುವು ಕೋಮುವಾದ ಮತ್ತು ಭ್ರಷ್ಟಾಚಾರ ನೀತಿಗೆ ತಡೆಯಾಗಬಹುದೆಂಬ ಭೀತಿ ಬಿಜೆಪಿಗೆ ಇದೆ: SDPI ತಿರುಗೇಟು

Prasthutha|

ಉಡುಪಿ: ಕಾಪು ಪುರಸಭೆ ಚುನಾವಣೆಯಲ್ಲಿ SDPI ಪಕ್ಷದ ಅಭ್ಯರ್ಥಿಗಳು ಜಯ ಗಳಿಸಿರುವುದು ಮಾರಕ ಎಂದು ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ನೀಡಿರುವ ಹೇಳಿಕೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ನಝೀರ್ ಅಹ್ಮದ್ ಅವರು ಖಂಡಿಸಿದ್ದಾರೆ.

- Advertisement -

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಭಾಗವಹಿಸಿ ಸಂವಿಧಾನಾತ್ಮಕವಾಗಿ ಜಯಗಳಿಸಿರುವ SDPI ಪಕ್ಷದ ವಿರುದ್ಧ ಬಿಜೆಪಿ ಮುಖಂಡನ ಬಾಲಿಶ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ರಾಷ್ಟ್ರಪಿತ ಗಾಂಧೀಜಿಯನ್ನು ಕೊಂದ ಗೋಡ್ಸೆಯ ಪರ ಮಾತನಾಡುವ ಮತ್ತು ದೇಶದ ಸಂವಿಧಾನವನ್ನೇ ಬದಲಾಯಿಸಲು ಹೊರಟ ಬಿಜೆಪಿಗೆ ದೇಶದ ಸಂವಿಧಾನವನ್ನು ಯಥಾ ರೂಪದಲ್ಲಿ ಜಾರಿಗೊಳಿಸಲು ಕಟಿಬದ್ದರಾಗಿ ಕಾರ್ಯಾಚರಿಸುವ SDPI ಪಕ್ಷ ದೇಶ ವಿರೋಧಿಯಾಗಿ ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಅವರು ಹೇಳಿದ್ದಾರೆ.

ಕಾಪು ಪುರಸಭೆಯಲ್ಲಿ ಕಳೆದ ಅವಧಿಯಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿ ಪಕ್ಷ ನಡೆಸಿದ ಭ್ರಷ್ಟಾಚಾರ ಹಾಗೂ ಕೋಮುವಾದಿ ನೀತಿಗಳ ವಿರುದ್ಧ ಒಂದು ವಿರೋಧಪಕ್ಷವಾಗಿ SDPI ಪುರಸಭೆಯ ಒಳಗಡೆ ಧ್ವನಿ ಎತ್ತಲಿದೆ ಎಂಬ ಭಯದಿಂದ ಇಂತಹ ಬಾಲಿಶ ಹೇಳಿಕೆಯನ್ನು ಬಿಜೆಪಿ ಮುಖಂಡ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿಯ ಕೋಮುವಾದಿ ನೀತಿ ಹಾಗೂ ಭ್ರಷ್ಟಾಚಾರದ ವಿರುದ್ಧ ಪುರಸಭೆಯ ಒಳಗಡೆ ಧ್ವನಿಯೆತ್ತಲು SDPI ಪಕ್ಷದ ಸದಸ್ಯರು ಶಕ್ತರಾಗಿದ್ದಾರೆ. ಬಿಜೆಪಿಯ ಇಂತಹ ಅಪಪ್ರಚಾರಗಳಿಗೆ SDPI ಪಕ್ಷ ಎಂದೂ ಕುಗ್ಗುವುದಿಲ್ಲ ಎಂದು ನಝೀರ್ ಅಹ್ಮದ್ ತಿಳಿಸಿದ್ದಾರೆ.



Join Whatsapp