ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ SDPI ಬೃಹತ್ ಪ್ರತಿಭಟನೆ

Prasthutha|

ಮಂಗಳೂರು: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್ ಡಿಪಿಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

- Advertisement -


ಪ್ರತಿಭಟನಾ ಸಭೆಯಲ್ಲಿ ಎಸ್ ಡಿಪಿಐ ಮುಖಂಡ ರಿಯಾಝ್ ಕಡಂಬು ಮಾತನಾಡಿದ, ವಕ್ಫ್ ಆಸ್ತಿ ಹಿಂದೆಯೂ ಮುಸಲ್ಮಾನರದ್ದಾಗಿತ್ತು. ಇಂದು ಹಾಗೂ ಮುಂದೆಯೂ ಮುಸಲ್ಮಾನರದ್ದಾಗಿರುತ್ತದೆ. ಇದನ್ನು ಯಾರಿಂದಲೂ ಕಬಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


ವಕ್ಫ್ ಆಸ್ತಿಯ ಉಳಿವಿಗಾಗಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧ. ಅಗತ್ಯ ಬಿದ್ದಲ್ಲಿ ಪ್ರಾಣ ಅರ್ಪಿಸಿ ವಕ್ಫ್ ಆಸ್ತಿ ಉಳಿಸುತ್ತೇವೆ. ವಕ್ಫ್ ಆಸ್ತಿ ಮೇಲೆ ಬಿಜೆಪಿಗಾಗಲಿ ಯಾವುದೇ ಸರಕಾರಕ್ಕಾಗಲಿ ಅಧಿಕಾರವಿಲ್ಲ. ಬಾಬರಿ ಮಸೀದಿಯನ್ನು ಕಸಿದುಕೊಂಡಂತೆ ವಕ್ಫ್ ಆಸ್ತಿ ಕಸಿದುಕೊಳ್ಳಲು ಮುಂದಾಗಬೇಡಿ. ಜೀವ ಭಯ ಬಿಟ್ಟು ಸಾವಿಗೂ ಹೆದರದೆ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.

- Advertisement -


ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರೈತರು, ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ಪ್ರಯತ್ನ ಸಾಗಿಸುತ್ತಲೇ ಇದೆ. ಇದೀಗ ಮುಸ್ಲಿಮರನ್ನು ಅಭಿವೃದ್ಧಿಪಡಿಸುವ ನೆಪವೊಡ್ಡಿ ವಕ್ಫ್ ಆಸ್ತಿಯ ಮೇಲೆ ಕಣ್ಣಿಟ್ಟಿದೆ. ಇದು ಸಂಘಪರಿವಾರದ ಹಿಡೆನ್ ಅಜೆಂಡಾ ಆಗಿದೆ ಎಂದು ಹೇಳಿದ್ದಾರೆ.


ಮುಸ್ಲಿಮರ ಸಬಲೀಕರಣಕ್ಕೆ ಮೀಸಲಿಟ್ಟಿರುವ ವಕ್ಫ್ ಸೊತ್ತನ್ನು ಕಬಳಿಸಲು ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ. ವಕ್ಫ್ ಆಸ್ತಿಯ ಉಳಿವಿಗಾಗಿ ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದರು.
ಎಸ್ಡಿಪಿಐ ರಾಜ್ಯ ಸಮಿತಿಯ ಸದಸ್ಯರಾದ ರಿಯಾಝ್ ಕಡಂಬು, ಶಾಹಿದಾ ತಸ್ನೀಮ್, ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಮುಖಂಡ ಅಶ್ರಫ್ ಅಡ್ಡೂರು ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಸಮಿತಿಯ ಸದಸ್ಯ ನವಾಝ್ ಉಳ್ಳಾಲ್, ಸುಹೈಲ್ ಮತ್ತಿತರರು ಉಪಸ್ಥಿತರಿದ್ದರು.



Join Whatsapp