ಇಂದು ಗುರುಪುರ ಕೈಕಂಬದಲ್ಲಿ SDPI ನೂತನ ಕಚೇರಿ ಉದ್ಘಾಟನೆ

Prasthutha|

- Advertisement -

ಗುರುಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗುರುಪುರ ಬ್ಲಾಕ್ ಸಮಿತಿಯ ನೂತನ ಕಛೇರಿಯ ಉದ್ಘಾಟನೆ ಇಂದು ಸಂಜೆ 4.30ಕ್ಕೆ ನಡೆಯಲಿದೆ.

ಸುರಲ್ಪಾಡಿ ಸೋಹಾ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ‌.

- Advertisement -

ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಅತಾವುಲ್ಲಾ ಜೋಕಟ್ಟೆ ರವರು ಕಛೇರಿಯನ್ನು ಉದ್ಘಾಟಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಸ್ಡಿಪಿಐ ದ‌‌.ಕ ಜಿಲ್ಲಾ ಪ್ರದಾ‌ನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, SDTU ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ, ಎಸ್ಡಿಪಿಐ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರು ಆಸೀಫ್ ಕೋಟೆಬಾಗಿಲು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರು ಯಾಸೀನ್ ಅರ್ಕುಳ, ಉತ್ತರ ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಅಡ್ದೂರು ಹಾಗೂ ಇನ್ನಿತರ ಸಾಮಾಜಿಕ ರಾಜಕೀಯ ನಾಯಕರು ಆಗಮಿಸಲಿದ್ದಾರೆ‌ ಎಂದು ಎಸ್ಡಿಪಿಐ ಗುರುಪುರ ಬ್ಲಾಕ್ ಸಮಿತಿಯ ಅಧ್ಯಕ್ಷರಾದಂತಹ ಮುಝಮ್ಮಿಲ್ ನೂಯಿ ಅಡ್ಡೂರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp