October 9, 2020

ಸಜೀಪ ಗ್ರಾಮಪಂಚಾಯತ್ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಎಸ್.ಡಿ.ಪಿ.ಐ

ಬಂಟ್ವಾಳ: ಇಲ್ಲಿನ ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪ್ರರ್ಧಿಸಲಿರುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಎಸ್.ಡಿ.ಪಿ.ಐ ಪ್ರಕಟಿಸಿದೆ.

ಅ.6ರಂದು ನಡೆದ ಅಭ್ಯರ್ಥಿ ಘೋಷಣಾ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.

ವಾರ್ಡ್ ನಂಬರ್ ಒಂದರಿಂದ ಸಮೀರ್ ನಂದಾವರ, ಅರ್ಷಿದಾ ಸವಾದ್, ಜಮಾಲ್ ರೋಯಲ್, ವಾರ್ಡ್ ನಂಬರ್ ಎರಡರಿಂದ ಆಸಿಫ್ ನಂದಾವರ, ಸಿದ್ದೀಕ್ ಅರಫಾ, ಬಿ.ಪಾತುಮ್ಮ (ಸಾಮಾನ್ಯ) ಸ್ಪರ್ಧಿಸಲಿದ್ದಾರೆ.

ಅದೇ ವೇಳೆ ನಂದಾವರ ಕೋಟೆ ವಾರ್ಡ್ ನಿಂದ ಇಬ್ರಾಹೀಂ ಆಟೊ, ಹಾಕಿಂ ನಂದಾವರ ಕೋಟೆ, ಸಬೀನಾ ಹಮೀದ್ ಕೊಪ್ಪಳ ವಾರ್ಡ್ ನಿಂದ ಸವಾದ್ ನಂದಾವರ, ಹಸನಬ್ಬ ನಂದಾವರ, ಜಮೀಲಾ ಇಬ್ರಾಹೀಂ ಸ್ಪರ್ಧಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ನಂದಾವರ ಬ್ರಾಂಚ್ ಅಧ್ಯಕ್ಷ ಆಸೀಫ್ ನಂದಾವರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿದ್ದೀಕ್ ಪನಾಮ, ಪಕ್ಷದ ಧ್ಯೇಯೋದ್ದೇಶ ಹಾಗೂ ದೇಶಾದ್ಯಾಂತ ಫ್ಯಾಶಿಸ್ಟ್ ಶಕ್ತಿಗಳು ನಡೆಸುತ್ತಿರುವ ಅಕ್ರಮ ಅನ್ಯಾಯಗಳನ್ನು ವಿವರಿಸಿದರು.

ಎಸ್ಡಿಪಿಐ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಎಂ.ಆರ್. ಇಕ್ಬಾಲ್ ಮಾತನಾಡಿ ಅನ್ಯಾಯಗಳ ವಿರುದ್ಧ ಹೋರಾಡುವವರ ಮೇಲೆ ಸುಳ್ಳಾರೋಪ ಹೊರಿಸಿ ಜೈಲಿಗೆ ತಳ್ಳುವ ಷಡ್ಯಂತ್ರವನ್ನು ಬಿಜೆಪಿ ಮಾಡುತ್ತಿದ್ದು, ಇಂತಹ ಪ್ರಯತ್ನಗಳಿಗೆ ಎಸ್.ಡಿ.ಪಿ.ಐ ಜಗ್ಗಲಾರದು ಎಂದರು.

ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿಯ ಕಾರ್ಯದರ್ಶಿಯಾದ ಮೂನಿಶ್ ಅಲಿ ಅಭ್ಯರ್ಥಿಗಳನ್ನು ಘೋಷಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!