200ಕ್ಕೂ ಹೆಚ್ಚು ರೈತ ಸಂಘಟನೆಗಳು ಹಮ್ಮಿಕೊಂಡಿರುವ ‘ದಿಲ್ಲಿ ಚಲೋ’ ಹೋರಾಟಕ್ಕೆ SDPI ಸಂಪೂರ್ಣ ಬೆಂಬಲ: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ರೈತರ ಬದುಕನ್ನು ಬಂಡವಾಳಶಾಹಿಗಳ ಕೈಗೆ ಒಪ್ಪಿಸಲು ರೈತ ವಿರೋಧಿ ಮೋದಿ ಸರ್ಕಾರ ದುರುದ್ದೇಶದಿಂದ ರೈತ ವಿರೋಧಿ ಕಾಯಿದೆಗಳನ್ನು ಜಾರಿ ಮಾಡಲು ಹೊರಟಿತ್ತು. ಅದರ ವಿರುದ್ಧ 2021 ರಲ್ಲಿ ರೈತರು ಹಮ್ಮಿಕೊಂಡಿದ್ದ ಬೃಹತ್ ಮತ್ತು ಸುಧೀರ್ಘ ಪ್ರತಿಭಟನೆಯನ್ನು ಹಿಂಪಡೆಯಲು ರೈತರು ಅಂದು ಒಪ್ಪಿದ್ದು ಕನಿಷ್ಠ ಬೆಂಬಲ ಬೆಲೆ ಮತ್ತು ಇನ್ನಿತರೆ ಅಶ್ವಾಸನೆಗಳ ಮೇಲೆ. ಇದಾಗಿ ಮೂರು ವರ್ಷ ಕಳೆದಿದ್ದರೂ ಇಲ್ಲಿಯವರೆಗೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುಲು ಕ್ರಮಕ್ಕೆ ಮುಂದಾಗಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಇದರ ವಿರುದ್ಧ ಇದೇ 13ನೇ ತಾರೀಖು ಸುಮಾರು 200ಕ್ಕೂ ಹೆಚ್ಚು ರೈತ ಸಂಘಟನೆಗಳು ಹಮ್ಮಿಕೊಂಡಿರುವ ಚಲೋ ದಿಲ್ಲಿ ಹೋರಾಟಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

- Advertisement -

ಅಂದು ರೈತರು ಬೀದಿಗೆ ಬಂದು ತಿಂಗಳುಗಳ ಕಾಲ ಪ್ರತಿಭಟನೆಗೆ ಕೂತು, ಸುಮಾರು 700ಕ್ಕೂ ಹೆಚ್ಚು ಹುತಾತ್ಮರಾದ ಹಿನ್ನಲೆಯಲ್ಲಿ ದೆಹಲಿ ಹಾಗೂ ಮೋದಿ ಸರ್ಕಾರ ನಡುಗಿಹೋಗಿತ್ತು. ವಿಧಿ ಇಲ್ಲದೆ ಅವರ ಮುಂದೆ ಕೈ ಮುಗಿದು ಕ್ಷಮೆಯಾಚಿಸಿದ್ದ ಪ್ರಧಾನಿ ಮೋದಿ ರೈತರ ಬೇಡಿಕೆಗಳನ್ನು ಅದರಲ್ಲೂ ಮುಖ್ಯವಾಗಿ ಕನಿಷ್ಠ ಬೆಂಬಲ ಬೆಲೆಯ ಬೇಡಿಕೆಯನ್ನು ನೆರವೇರಿಸುವುದಾಗಿ ವಾಗ್ದಾನ ನೀಡಿದ್ದರು. ಅದನ್ನು ನಂಬಿದ ರೈತರು ಅಂದು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿತ್ತು. ಆದರೆ ಇದು ಕಳೆದು ಮೂರು ವರ್ಷ ಕಳೆದಿದ್ದರೂ ಕನಿಷ್ಠ ಬೆಂಬಲ ಬೆಲೆ ನೀಡದ ಕೇಂದ್ರ ಸರ್ಕಾರ ರೈತರನ್ನು ಪೀಡಿಸುತ್ತಿದೆ. ಇದು ರೈತರಿಗೆ ಮೋದಿ ಸರ್ಕಾರ ಮಾಡುತ್ತಿರುವ ಅತಿ ದೊಡ್ಡ ದ್ರೋಹ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಯ ಕೇಳಲು ದೆಹಲಿಗೆ ಬರುತ್ತಿರುವ ರೈತರನ್ನು ತಡೆಯಲು ಗಡಿಗಳಲ್ಲಿ ಮುಳ್ಳು ಬೇಲಿ ಹಾಕುವುದು, ರಸ್ತೆ ಅಗೆಯುವುದು, ನಿಷೇಧಾಜ್ಞೆ ಹೇರುವುದು ಎಂಬ ಹಳೆಯ ತಂತ್ರಗಳನ್ನೇ ಮೋದಿ ಸರ್ಕಾರ ಬಳಸುತ್ತಿದೆ. ಇಂಥಹ ನೀಚತನಕ್ಕೆ ಜಾರುವುದನ್ನು ಬಿಟ್ಟು ಸರ್ಕಾರ ರೈತರನ್ನು ಗೌರವಯುತವಾಗಿ ಕೂರಿಸಿಕೊಂಡು ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಜೀದ್ ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp