ಎಸ್ ಡಿಪಿಐ ಸಂಸ್ಥಾಪನಾ ದಿನಾಚರಣೆ: ದೇಶಾದ್ಯಂತ ವೈವಿಧ್ಯಮಯ ಕಾರ್ಯಕ್ರಮ

Prasthutha|

ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ಪಕ್ಷದ 13ನೇ ಸಂಸ್ಥಾಪನಾ ದಿನವನ್ನು ದೇಶಾದ್ಯಂತ ಮಂಗಳವಾರ ಪಕ್ಷದ ಕಾರ್ಯಕರ್ತರು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಿದರು. ಬೂತ್ ಮಟ್ಟದಿಂದ ಜಿಲ್ಲಾ ಸಮಿತಿಯ ವರೆಗಿನ ಎಲ್ಲಾ ಸ್ತರಗಳಲ್ಲೂ ಪಕ್ಷದ ಧ್ವಜಾರೋಹಣ, ಸಿಹಿತಿಂಡಿ ವಿತರಣೆ, ಸಾರ್ವಜನಿಕ ರಸ್ತೆ, ಚರಂಡಿ, ಶಾಲಾ ವಠಾರ, ಆಸ್ಪತ್ರೆ ವಠಾರ ಸ್ವಚ್ಛತೆ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದು, ಆರೋಗ್ಯ ಶಿಬಿರ, ಬಡವರಿಗೆ ಆಹಾರ ಕಿಟ್ ವಿತರಣೆಯಂತಹ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷದ ಕಾರ್ಯಕರ್ತರು ಸಂಸ್ಥಾಪನಾ ದಿನವನ್ನು ಆಚರಿಸಿದರು.

- Advertisement -


ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ಕಾರ್ಯಕ್ರಮ
:
ಮಂಗಳೂರಿನ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಸಂಸ್ಥಾಪನಾ ದಿನದ ಧ್ವಜಾರೋಹಣವನ್ನು ದ.ಕ.ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ನೆರವೇರಿಸಿದರು. ಪಕ್ಷ ಬೆಳೆದುಬಂದ ದಾರಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಅವರು ಮಾತನಾಡಿದರು.
ರಾಜ್ಯ ಸಮಿತಿ ಸದಸ್ಯರಾದ ಜಲೀಲ್ ಕೃಷ್ಣಾಪುರ, ಅಕ್ಬರ್ ಅಲಿ ಪೊನ್ನೋಡಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಕಾರ್ಯದರ್ಶಿಗಳಾದ ಶಾಕಿರ್ ಅಳಕೆ ಮಜಲ್, ಸುಹೈಲ್ ಕಾನ್, ಇಕ್ಬಾಲ್ ಐ. ಎಮ್. ಆರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. SDPI ಜಿಲ್ಲಾ ಸಮಿತಿ ಸದಸ್ಯ ಕಾದರ್ ಫರಂಗಿಪೇಟೆ ಸ್ವಾಗತಿಸಿ ನಿರೂಪಿಸಿದರು.

ಸುಳ್ಯದಲ್ಲಿ ಧ್ವಜಾರೋಹಣ:
ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯದ ಪೈಚಾರ್ ಬೂತ್ ಸಮಿತಿಯ ವತಿಯಿಂದ ಪೈಚಾರ್ ಜಂಕ್ಷನ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್ ಡಿಪಿಐ ಸುಳ್ಯ ರೂರಲ್ ಬ್ಲಾಕ್ ಅಧ್ಯಕ್ಷರಾದ ಅಬಿದ್ ಪೈಚಾರ್ ಧ್ವಜಾರೋಹಣಗೈದರು. ಸುಳ್ಯ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಇಕ್ಬಲ್ ಬೆಳ್ಳಾರೆ ಸಂದೇಶ ಭಾಷಣ ಮಾಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಅಬ್ದುಲ್ ಕಲಾಂ ಪ್ರಾಸ್ತಾವಿಕವಾಗಿ ಮಾತನಾಡಿದರು. ರಝಾಕ್ ಪೈಚಾರ್ ಸ್ವಾಗತಿಸಿ ವಂದಿಸಿದರು.

- Advertisement -


ಕುಶಾಲನಗರದಲ್ಲಿ ಧ್ವಜಾರೋಹಣ:
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುಶಾಲನಗರ ಘಟಕದ ವತಿಯಿಂದ SDPI ಸಂಸ್ಥಾಪನ ದಿನದ ಅಂಗವಾಗಿ ಧ್ವಜಾರೋಹಣವನ್ನು ಕುಶಾಲನಗರ ನಗರ ಅಧ್ಯಕ್ಷ ಝಕರಿಯಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಫಿ ನೆರೆವೆರಿಸಿದರು. ಝಕರಿಯಾ ಪ್ರಾಸ್ತಾವಿಕ ಭಾಷಣ ಮಾಡಿ ಎಸ್.ಡಿ.ಪಿ.ಐ ಪ್ರಜಾಪ್ರಭುತ್ವದ ಉಳಿವಿಗಾಗಿ ಸದಾ ಮುಚ್ಚುಣಿಯಲ್ಲಿರುತ್ತದೆ ಎಂದೂ ಸಂದೇಶ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮಾತನಾಡಿ ಸಮಾಜಕ್ಕಾಗಿ ನಾವು ಎದ್ದಿ ನಿಂತೆವು ಸಮಾಜ ನಮಗಾಗಿ ಎದ್ದು ನಿಲ್ಲಲಿದೆ. ಸರ್ವ ಇಂಡಿಯಾದ ನಾಗರಿಕರಿಗೆ 13ನೇ ವರ್ಷದ SDPI ಸ್ಥಾಪನ ದಿನದ ಶುಭಾಷಯಗಳನ್ನು ತಿಳಿಸಿದರು.


ದಲಿತ, ಅಲ್ಪಸಂಖ್ಯಾತ, ಬಡ, ರೈತ ಮತ್ತು ಆದಿವಾಸಿಗಳ ಪರ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಇಂಡಿಯಾ ದ ಏಕೈಕ ಪಕ್ಷ ಎಸ್.ಡಿ.ಪಿ.ಐ. ಹಸಿವು ಮತ್ತು ಭಯ ಮುಕ್ತ ಇಂಡಿಯಾ ನಮ್ಮ ಗುರಿ. ಪ್ರಜಾಪ್ರಭುತ್ವದ ಕಾಯಕಲ್ಪ ಎಸ್.ಡಿ.ಪಿ.ಐ ಸಂಕಲ್ಪ. ಸೌಹಾರ್ದ ಐಕ್ಯತೆ ಮತ್ತು ಸಮಾನತೆಯ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಮ ಸಮಾಜ ಮತ್ತು ಸೌಹಾರ್ದ ಭಾರತ ನಿರ್ಮಾಣ ಮಾಡಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ನಗರ ಉಪಾಧ್ಯಕ್ಷರಾದ ಉಸ್ಮಾನ್, ಪಕ್ಷದ ಪ್ರಮುಖರಾದ ಭಾಷಾ, ಹನೀಫ್, ಖಲೀಲ್ ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ಬಂಟ್ವಾಳದಲ್ಲಿ ಕಾರ್ಯಕ್ರಮ ಆಯೋಜನೆ:
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ ರೋಡಿನ ಕೈಕಂಬದಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಎಸ್. ಎಚ್ ನೆರವೇರಿಸಿ ಪ್ರಾಸ್ತಾವಿಕವಾಗಿ ನುಡಿದರು. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಯವರು ಮಾತನಾಡಿ, ಎಸ್ ಡಿಪಿಐ ಪಕ್ಷವು ಜನಹಿತ ರಾಜಕೀಯದ 13 ವರ್ಷಗಳನ್ನು ಪೂರೈಸಿ 14 ನೇ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿದೆ. ನಮ್ಮ ಈ ರಾಜಕೀಯ ಪಯಣದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದೇವೆ. ಆರಂಭ ಕಾಲಘಟ್ಟದಲ್ಲಿ ನಮ್ಮ ರಾಜಕೀಯ ಅಜೆಂಡಾದ ಬಗ್ಗೆ ಜನಸಾಮಾನ್ಯರಿಗೆ ಗೊಂದಲಗಳಿದ್ದರೂ ಕೂಡ ಈಗ ಪ್ರತಿಯೊಬ್ಬ ನಾಗರಿಕನೂ ಎಸ್ ಡಿಪಿಐ ಯಂತಹ ಒಂದು ರಾಜಕೀಯ ಪಕ್ಷದಿಂದ ಮಾತ್ರ ಬಿಜೆಪಿಯ ಧರ್ಮಾಧಾರಿತ, ಸರ್ವಾಧಿಕಾರಿ ಧೋರಣೆಯ ರಾಜಕೀಯವನ್ನು ಎದುರಿಸಲು ಸಾಧ್ಯ ಎಂಬ ಸ್ಪಷ್ಟತೆಯನ್ನು ಹೊಂದಿದ್ದಾನೆ ಎಂದರು.


ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ, ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಮುನೀಷ್ ಅಲಿ, ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರ್, ಮತ್ತಿತರರು ಉಪಸ್ಥಿತರಿದ್ದರು.



Join Whatsapp