ಎದುರುಪದವು | SDPI ಸಂಸ್ಥಾಪನಾ ದಿನಾಚರಣೆ

Prasthutha|

ಎದುರುಪದವು : ಎಸ್.ಡಿ.ಪಿ.ಐ ಪಕ್ಷದ 12ನೇ ವರ್ಷದ ಸ್ಥಾಪನೆ ದಿನದ ಅಂಗವಾಗಿ ಎದುರುಪದವಿನಲ್ಲಿ ದ್ವಜರೋಹಣ ಕಾರ್ಯಕ್ರಮ ನಡೆಸಲಾಯಿತು.

- Advertisement -

ದ್ವಜರೋಹನವನ್ನು ಎದುರುಪದವು ಎಸ್.ಡಿ. ಪಿ.ಐ ಬ್ರಾಂಚ್ ಅಧ್ಯಕ್ಷರಾದ ಸಿರಾಜ್ (ಮೋನು) ನೆರವೇರಿಸಿದರು ಈ ಸಂದರ್ಭದಲ್ಲಿ ಪಕ್ಷದ ಸ್ಥಾಪನೆಯ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರಾದ ಸಾಜುದ್ದೀನ್ ರವರು ಮಾತನಾಡಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವನ್ನು 2009 ರಲ್ಲಿ ಸ್ಥಾಪಿಸಲಾಯಿತು ಬಡವರು,ರೈತರು, ಕಾರ್ಮಿಕರು,ಆದಿವಾಸಿಗಳು, ದಲಿತರು ಹಾಗೂ ಮುಸ್ಲಿಮರನ್ನೊಳಗೊಂಡಂತೆ ಕಡೆಗನಿಸಲ್ಪಟ್ಟ ವರ್ಗಗಳಿಗೆ ಸಾಕಷ್ಟು ಅಧಿಕಾರದಲ್ಲಿ ಪಾಲು ಹಾಗೂ ಸಮಾನತೆಯನ್ನು ಸಾಧಿಸುವ ಉದ್ದೇಶವನಿಟ್ಟುಕೊಂಡು ಪಕ್ಷವು ನಿರಂತವಾಗಿ ಕೆಲಸ ಮಾಡುತಾ ಬರುತ್ತಿದೆ ಸ್ವಾತಂತ್ರ್ಯ ಪ್ರತಿಯೊಬ್ಬರ ಜನ್ಮಸಿದ್ದ ಹಕ್ಕಾಗಿದೆ ಒಂದು ಪ್ರಜಾಪ್ರಭುತ್ವ ರಾಷ್ಟ್ರದ ನಾಗರಿಕರಾಗಿರುವ ನಮಗೆ ಸ್ವಾತಂತ್ರ್ಯವು ನಮ್ಮ ಸಂವಿಧಾನ ನೀಡಿದ ಖಾತರಿಯೂ ಕೂಡ ಆಗಿದೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕ್ಯೆಗೆತ್ತಿಕೊಂಡ ಹಸಿವು ಮುಕ್ತ ಸ್ವಾತಂತ್ರ್ಯ ಭಯ ಮುಕ್ತ ಸ್ವಾತಂತ್ರ್ಯ ಘೋಷಣೆಯು ಇಂಡಿಯಾ ದೇಶದಲ್ಲಿ ಬವಣೆಗೊಳಗಾಗುತ್ತಿರುವ ಎಲ್ಲರ ಉಜ್ವಲ ಆಶಾಭಾವನೆ ಹಾಗೂ ಭವಿಷ್ಯವನ್ನು ಹೊತ್ತು ತರುತ್ತಿದೆ ಎಂದು ಸಂಸ್ಥಾಪನ ದಿನದ ಸಂದೇಶವನ್ನು ನೀಡಿದರು.

ಕಾರ್ಯಕ್ರಮದ ಸ್ವಾಗತ ಭಾಷಣ ಹಾಗೂ ಧನ್ಯವಾದವನ್ನು ಮೊಯ್ದೀನ್ ನೆರವೇರಿಸಿದರು.. ಈ ಸಂದರ್ಭದಲ್ಲಿ ಸುಮಾರು 25 ವರ್ಷಗಳಲ್ಲಿ ಸಮಾಜ ಸೇವೆಯನ್ನು ಮಾಡುತ್ತ ಬಂದ ಹಮೀದ್(ಕೂಳೂರು) ಇವರಿಗೆ ಬದ್ರುದ್ದೀನ್ ರವರು ಸ್ಮರಣಿಕೆಯನ್ನು ಕೊಟ್ಟು ಗೌರವಿಸಲಾಯಿತು.

- Advertisement -

ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಣ್ಣೂರು ವಲಯ ಕಾರ್ಯದರ್ಶಿಗಳಾದ ಇಕ್ಬಾಲ್ ಸಿ.ಎಚ್,ರಝಾಕ್ ಎಸ್.ಡಿ.ಪಿ.ಐ ವಲಯ ಸಮಿತಿ ಅಧ್ಯಕ್ಷರು ವಾಮಂಜೂರು, ರಿಯಾಝ್ ಸತ್ಯಸಮಚಾರ್ ಸಮಾಜ ಸೇವಾ ವಾಟ್ಸಪ್ ಗ್ರೂಪ್ ಹಾಗೂ ಎಸ್.ಡಿ.ಪಿ.ಐ ಕಾರ್ಯಕರ್ತರು ಪಾಲ್ಗೊಂಡದ್ದರು ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.



Join Whatsapp