ಎಸ್.ಡಿ.ಪಿ.ಐ. ಕೊಡಗು ಜಿಲ್ಲೆಯ ನೂತನ ಪದಾಧಿಕಾರಿಗಳ ಆಯ್ಕೆ

Prasthutha|

- Advertisement -

▪️ ಅಧ್ಯಕ್ಷರಾಗಿ ಮುಸ್ತಫಾ ಮಡಿಕೇರಿ
▪ಪ್ರ ಕಾರ್ಯದರ್ಶಿ ಯಾಗಿ ಮೊಹಮ್ಮದ್ ಶಫಿ
▪️ಉಪಾಧ್ಯಕ್ಷರಾಗಿ ಮೇರಿ ವೇಗಸ್ ಆಯ್ಕೆ

ಮಡಿಕೇರಿ, ಸೆ 28:- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಡಗು ಜಿಲ್ಲೆಯ 2021-2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ನಗರದ ಹೊರ ವಲಯದ ಗ್ರೀನ್ ನೆಸ್ಟ್ ರೆಸಾರ್ಟ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ,ಪಕ್ಷದ ದ್ವಜಾರೊಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಗೈದರು.

- Advertisement -

ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪಕ್ಷದ ನೂತನ ಕೊಡಗು ಜಿಲ್ಲಾಧ್ಯಕ್ಷರಾಗಿ ಮುಸ್ತಫಾ ಮಡಿಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಶಫಿ ಕುಶಾಲನಗರ,ಉಪಾಧ್ಯಕ್ಷೆಯಾಗಿ ಮೇರಿ ವೇಗಸ್, ಕಾರ್ಯದರ್ಶಿಯಾಗಿ ಹಸೀನ ಮತ್ತು ಬಷೀರ್ ಅಹ್ಮದ್,ಕೋಶಾಧಿಕಾರಿಯಾಗಿ ಶಂಷೀರ್ ನೆಲ್ಲಿಹುದಿಕೇರಿ,ಮತ್ತು ಸದಸ್ಯರುಗಳಾಗಿ ಆಮೀನ್ ಮೋಹ್ಸಿನ್, ಅಬ್ದುಲ್ಲ ಅಡ್ಕರ್, ಸಂಶುದ್ದೀನ್, ಮನ್ಸೂರ್ ಮಡಿಕೇರಿ, ಕಬೀರ್ ಸೋಮವಾರಪೇಟೆ, ಮುಸ್ತಫ ಸಿದ್ದಾಪುರ,ಹಾಗೂ ಖಲೀಲ್ ಕ್ರಿಯೇಟಿವ್ ಆಯ್ಕೆ ಯಾದರು

ಪ್ರಾಸ್ತಾವಿಕ ಭಾಷಣವನ್ನು ನಿರ್ಗಮಿತ ಜಿಲ್ಲಾಧ್ಯಕ್ಷ ಮನ್ಸೂರ್ ಅಲಿ ಮಾತನಾಡಿ ಕಳೆದ ಮೂರು ವರ್ಷಗಳಲ್ಲಿ ಪಕ್ಷದ ಹೋರಾಟದ ಫಲವಾಗಿ ಜನರ ಬಳಿಗೆ ಮುಟ್ಟಲು ಸಾಧ್ಯವಾಗಿದೆ,ಹಾಗೂ ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿ ಹಳ್ಳಿ ಗಳಿಗೆ ನಮ್ಮ ಪಕ್ಷವು ಮುಟ್ಟುವಂತಾಗಬೇಕು,ಆ ಮೂಲಕ ಪಕ್ಷವನ್ನು ಇನ್ನಷ್ಟು ಬಲಿಷ್ಠ ಗೊಳಿಸಬೇಕೆಂದು ಹೇಳಿದರು.
ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್, ಮುಂದಿನ ಮೂರು ವರ್ಷಗಳ ಕಾಲ ಯಾವರೀತಿ ಜನರೊಡನೆ ಬೆರತು ಯಾವರೀತಿ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಟ್ಟು ಜನರ ಬಳಿ ಪಕ್ಷವನ್ನು ತಲುಪಿಸಬೇಕೆಂದು ಸವಿಸ್ತಾರವಾಗಿ ವಿವರಿಸಿಕೊಟ್ಟರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಳಿಪೇಟೆ ಮಾತನಾಡಿ ಶೋಶಿತ ದಮನಿತ ಹಿಂದುಳಿದ ವರ್ಗಗಳ ಹಾಗೂ ದೇಶದ ಬೆನ್ನೆಲುಬಾಗಿರು ರೈತರ ಪರವಾಗಿರುವ ಹೋರಾಟವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಗೊಳಿಸಬೇಕೆಂದು ಕರೆ ನೀಡಿದರು.

ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಚುನಾವಣೆ ಆಯ್ಕೆ ಪ್ರಕ್ರಿಯೆಯಯನ್ನು ನಡೆಸಿಕೊಟ್ಟರು.

ನೂತನ ಅಧ್ಯಕ್ಷರಾದ ಮುಸ್ತಫಾ ಮಡಿಕೇರಿ ಮಾತನಾಡಿ ಮುಂದಿನ ಮೂರು ವರ್ಷದ ವರಗೆ ನಾವೆಲ್ಲರು ಎಲ್ಲಾ ಜನಾಂಗಗಳನ್ನು ಒಟ್ಟಾಗಿ ಸೇರಿಸಿ ಮುಂದೆ ಬರುವ ಜಿಲ್ಲಾ ಪಂಚಾಯತ್ ಹಾಗು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಕೊಡಗಿನಲ್ಲಿ ಕನಿಷ್ಠ ವೆಂದರು ಎರಡನೇಯ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಬೇಕು ಈ ನಿಟ್ಟಿನಲ್ಲಿ ಎಲ್ಲರು ಸಹಕರಿಸಬೇಕೆಂದು ಹೇಳಿದರು.

ಸಭೆಯಲ್ಲಿ ಬೂತ್ ಸಮಿತಿ ಪದಾಧಿಕಾರಿಗಳು ನಗರ ಸಮಿತಿ, ಗ್ರಾಮ ಸಮಿತಿ,ವಿಧಾನಸಭಾ ಕ್ಷೇತ್ರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Join Whatsapp