SDPI ದಕ್ಷಿಣ ಕನ್ನಡ ನೂತನ ಜಿಲ್ಲಾಧ್ಯಕ್ಷರಾಗಿ ಅಬೂಬಕ್ಕರ್ ಕುಳಾಯಿ ಆಯ್ಕೆ

Prasthutha|

►ನೂತನ ಜಿಲ್ಲಾ ಸಮಿತಿಯ ವಿವರ ಇಲ್ಲಿದೆ

- Advertisement -

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಅಬೂಬಕ್ಕರ್ ಕುಳಾಯಿ ಅವರು ಆಯ್ಕೆಯಾಗಿದ್ದಾರೆ. ಇದೇ ವೇಳೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಸಾದಾತ್ ಬಜತ್ತೂರು ಆಯ್ಕೆಯಾಗಿದ್ದಾರೆ.  ಮುಂದಿನ ಮೂರು ವರ್ಷಗಳ ಅವಧಿಗೆ ಈ ಸಮಿತಿಯು ಅಸ್ತಿತ್ವದಲ್ಲಿರುತ್ತದೆ. ಇಂದು ಬಿಸಿ ರೋಡಿನಲ್ಲಿರುವ ಸಾಗರ್ ಆಡಿಟೋರಿಯಂನಲ್ಲಿ ನಡೆದ ಜಿಲ್ಲಾ ಪ್ರತಿನಿಧಿಗಳ   ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಯ ಆಯ್ಕೆ ನಡೆಯಿತು.

ಜಿಲ್ಲಾ ಸಮಿತಿಯ ನೂತನ ಉಪಾಧ್ಯಕ್ಷರಾಗಿ ವಿಕ್ಟರ್ ಮಾರ್ಟಿಸ್ ಹಾಗೂ ಮಿಸ್ರಿಯಾ ಕಣ್ಣೂರು ಆಯ್ಕೆಯಾದರೆ,  ಆಡಳಿತ ಕಾರ್ಯದರ್ಶಿಯಾಗಿ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಕಾರ್ಯದರ್ಶಿಗಳಾಗಿ ಸುಹೈಲ್ ಖಾನ್ ಹಾಗೂ ಶಾಕಿರ್ ಅಳಕೆಮಜಲು ಮತ್ತು ಕೋಶಾಧಿಕಾರಿಯಾಗಿ ಇಕ್ಬಾಲ್ ಐ ಎಂ ಆರ್ ಅವರು ಆಯ್ಕೆಯಾಗಿದ್ದಾರೆ.  

- Advertisement -

 ನೂತನ ಜಿಲ್ಲಾ ಸಮಿತಿಗೆ ಅಬ್ದುಲ್ ಅಝೀಝ್ ಸುರತ್ಕಲ್, ಅಥಾವುಲ್ಲಾ ಜೋಕಟ್ಟೆ, ಅಶ್ರಫ್ ಕೆ. ಸಿ. ರೋಡು, ಇಕ್ಬಾಲ್ ಬೆಳ್ಳಾರೆ, ಝಾಕಿರ್ ಉಳ್ಳಾಲ್, ಗಣೇಶ್ ಕುರಿಯನ್, ಜಮಾಲ್ ಜೋಕಟ್ಟೆ, ನಾಸಿರ್ ಸಜಿಪಾ, ಪ್ರೇಮಾ ಮಲ್ಲೂರು, ಯೂಸುಫ್ ಆಲಡ್ಕ, ಸಫಾ ಸಲ್ಮಾಕಾವಲ್’ಕಟ್ಟೆ ಸದಸ್ಯರುಗಳಾಗಿ ಆಯ್ಕೆಯಾಗಿದ್ದಾರೆ.

ಮುಖ್ಯ ಚುನಾವಣಾಧಿಕಾರಿಗಳಾಗಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಅವರು ಆಗಮಿಸಿದ್ದರು. ಸಹಾಯಕ ಚುನಾವಣಾಧಿಕಾರಿಗಳಾಗಿ ಮಾಜಿ ಬಿಬಿಎಂಪಿ ಕಾರ್ಪೊರೇಟರ್ ಮುಜಾಹಿದ್ ಪಾಶಾ ಉಪಸ್ಥಿತರಿದ್ದರು.



Join Whatsapp