ಉಡುಪಿ: ಮುಸ್ಲಿಂ ಹಾಗೂ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷನೆಂಬ ಕಾರಣಕ್ಕೆ ಹೊಟೇಲ್ ತೆರವುಗೊಳಿಸಲಾಗಿದೆ ಎಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಹೇಳಿದ್ದಾರೆ.
ಇಂದು ಬೆಳಿಗ್ಗೆ ಉಡುಪಿ ನಗರಸಭೆ ಅಧಿಕಾರಿಗಳು ಹೊಟೇಲ್ ತೆರವುಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಸ್ಲಿಂ ಮತ್ತು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷನೆಂಬ ಕಾರಣಕ್ಕೆ ಹೊಟೇಲ್ ತೆರವುಗೊಳಿಸಲಾಗಿದೆ. ಉಡುಪಿಯಲ್ಲಿ ಕೇವಲ ನಮ್ಮದೊಂದೆ ಕಟ್ಟಡ ಈ ರೀತಿ ಇರುವುದಲ್ಲ. ಹಿಜಾಬ್ ಪರವಾಗಿ ಹೇಳಿಕೆ ಕೊಟ್ಟ ಪ್ರತಿಫಲ ಇಂದು ಹೋಟೆಲ್ ಕೆಡವಲಾಗಿದೆ ಎಂದು ಹೇಳಿದರು.
ಪ್ರತಿ ತಿಂಗಳಿಗೆ 30 ಸಾವಿರಕ್ಕೂ ಅಧಿಕ GST ಸರಕಾರಕ್ಕೆ ನೀಡುತ್ತಿದ್ದೇನೆ. ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟುತ್ತೇನೆ. ಅದಕ್ಕಿಂತ ಮುಖ್ಯವಾಗಿ ಹಲವು ಮಂದಿಗೆ ಉದ್ಯೋಗ ನೀಡಿದ್ದೇವೆ. ಇದೀಗ ಈ ರೀತಿ ಏಕಾಏಕಿ ತೆರವುಗೊಳಿಸಲಾಗಿದ್ದು, ಬಿಜೆಪಿ ಹಠ ರಾಜಕೀಯ ನಡೆಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.