ಶೌರ್ಯ ಪ್ರಶಿಕ್ಷಣ ವರ್ಗ ಹೆಸರಿನಲ್ಲಿ ಸಂಘಪರಿವಾರ ಕಾರ್ಯಕರ್ತರಿಗೆ ಭಯೋತ್ಪಾದನಾ ತರಬೇತಿ: ಪ್ರಕರಣ ದಾಖಲಿಸಲು SDPI ಆಗ್ರಹ

Prasthutha|

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ್ ಎಜುಕೇಶನಲ್ ಇನ್ಸ್ಟಿಟ್ಯೂಟ್ ನಲ್ಲಿ  ದಿನಾಂಕ .5-5-2022 ರಿಂದ ದಿನಾಂಕ .13-5-2022.ರವರೆಗೆ  ಸಂಘಪರಿವಾರವೂ ಶೌರ್ಯ ಪ್ರಶಿಕ್ಷಣ ವರ್ಗ 2022 ಹೆಸರಿನಲ್ಲಿ ಹಿಂದುತ್ವ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ಮತ್ತು ಬಂದೂಕು ಸೇರಿದಂತೆ ಮುಂತಾದ  ಭಯೋತ್ಪಾದನೆಯ ತರಬೇತಿ ನೀಡಿ ಜಿಲ್ಲೆಯಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಲು ತಯಾರಿ ನಡೆಸುತ್ತಿರುವ ಸಂಘಪರಿವಾರದ ಕೃತ್ಯವೂ ಆತಂಕಕಾರಿ ಯಾಗಿದ್ದು,ಕೂಡಲೇ ಕೊಡಗು ಜಿಲ್ಲಾ ಪೋಲಿಸರು ಮತ್ತು ಜಿಲ್ಲಾಡಳಿತ ಭಯೋತ್ಪಾದನಾ ತರಬೇತಿ ಕೃತ್ಯದ ಆಯೋಜಕರಾದ ಸಂಘಪರಿವಾರದ ನಾಯಕರ ವಿರುದ್ಧ ಮತ್ತು ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಕಾರ್ಯಕರ್ತರ ವಿರುದ್ಧ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಲು ತಯಾರಿ ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೆಂದು ಎಸ್‌ಡಿಪಿಐ ಕೊಡಗು ಜಿಲ್ಲಾ ಕಾರ್ಯದರ್ಶಿ ಬಶೀರ್ ಮಡಿಕೇರಿ ಆಗ್ರಹಿಸಿದ್ದಾರೆ.

- Advertisement -

ಈ ಕುರಿತಾಗಿ ಪತ್ರಿಕಾ ಪ್ರಕಟಣೆ ನೀಡಿರುವ ಬಶೀರ್  ರವರು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತ್ರಿಶೂಲ ದೀಕ್ಷೆ ನೀಡಿದ ಬಳಿಕ ಭಜರಂಗದಳ ಗೂಂಡಗಳು ಅದನ್ನು  ನಾಗರಿಕರ ವಿರುದ್ಧ ಮತ್ತು ಎಬಿವಿಪಿ ಕಾರ್ಯಕರ್ತರು ಕಾಲೇಜಿನಲ್ಲಿ ವಿಧ್ಯಾರ್ಥಿಗಳ ವಿರುದ್ಧ ಬಳಸಿ ಕೊಲೆಯತ್ನದಂತಹ ಕೃತ್ಯವನ್ನು ಸಂಘಪರಿವಾರ ಸಂಘಟನೆಗಳು ನಡೆಸಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಿಸಿದ್ದರು,ಇದೀಗ ಕೊಡಗಿ‌ನಲ್ಲಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಬಂದೂಕು ತರಬೇತಿಯನ್ನು ಕೊಡುವ ಮೂಲಕ ಜಿಲ್ಲೆಯಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಸಂಘಪರಿವಾರ ಕಾರ್ಯಕರ್ತರು ಈ ಹಿಂದೆಯೂ ಅನೇಕ ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಹಲವಾರು ಆರೋಪಗಳು ಸಂಘಪರಿವಾರದ ಮೇಲಿದೆ.ನೆರೆಯ ಕೇರಳ ರಾಜ್ಯದಲ್ಲಿ ಕೂಡ ಸಂಘಪರಿವಾರ ಈ ರೀತಿಯ ಬಂದೂಕು ತರಬೇತಿ,ಪೆಟ್ರೋಲ್ ಬಾಂಬ್ ತಯಾರಿಕೆಯ ತರಬೇತಿ ನೀಡಿ ನಂತರ ಅದನ್ನು ಬೇರೆಬೇರೆ ಪಕ್ಷಗಳ ಕಛೇರಿ ಮತ್ತು ಬೇರೆ ಧರ್ಮದ ಪ್ರಮುಖ ವ್ಯಕ್ತಿಗಳ ಮನೆಯ ಮೇಲೆ ಹಾಗೂ ಪೋಲಿಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಹಲವಾರು ನಿದರ್ಶನಗಳು ಇವೆ.

ಹಾಗಾಗಿ ಕೊಡಗಿನ ಪೊನ್ನಂಪೇಟೆಯಲ್ಲಿ ನಡೆದ ಬಂದೂಕು ತರಬೇತಿ ಹಾಗೂ ಶಸ್ತ್ರ ದೀಕ್ಷೆಯನ್ನು ಪೋಲಿಸ್ ಇಲಾಖೆ ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಪರಿಗಣಿಸಿ ಕಾರ್ಯಕ್ರಮದ ಆಯೋಜಕರನ್ನು ಹಾಗೂ ಸಕಲೇಶಪುರದಿಂದ ನಿರಂತರವಾಗಿ ಕೊಡಗು ಜಿಲ್ಲೆಗೆ ಆಗಮಿಸಿ ಕೋಮು ವೈಷಮ್ಯವನ್ನು ಮೂಡಿಸಿ ಜಿಲ್ಲೆಯ ಶಾಂತಿಯನ್ನು ಕದಡಲು ಯತ್ನಿಸುತ್ತಿರುವ ರಘು ಸಕಲೇಶಪುರ ನನ್ನು ಕೂಡ ಬಂಧಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕೆಂದು ಎಸ್‌ಡಿಪಿಐ ಕೊಡಗು ಜಿಲ್ಲಾ ಕಾರ್ಯದರ್ಶಿ ಬಶೀರ್ ಮಡಿಕೇರಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.



Join Whatsapp