ಕಂದಾವರ ಪರಿಸರದಲ್ಲಿ ದರೋಡೆ ಪ್ರಕರಣ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುವಂತೆ SDPI ಆಗ್ರಹ

Prasthutha|

ಮಂಗಳೂರು: ಗುರುಪುರ ಕೈಕಂಬ ಪರಿಸರದ ಕಂದಾವರ ಮತ್ತು ಗುರುಕಂಬಳಗಳಲ್ಲಿ ಇತ್ತೀಚಿಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ದರೋಡೆ ಪ್ರಕರಣ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುವಂತೆ SDPI ಆಗ್ರಹಿಸಿದೆ.

- Advertisement -


ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ SDPI ಗುರುಪುರ ಬ್ಲಾಕ್ ಸಮಿತಿಯ ಕಾರ್ಯದರ್ಶಿ ಇರ್ಷಾದ್ ಅಡ್ಡೂರು,ಕಂದಾವರದ ಸುನೀಲ್ ಡಿಸೋಜ ಹಾಗೂ ಡಾ! ಯಾಕೂಬ್ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಅರಿತುಕೊಂಡು ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ, ಹಣ ಹಾಗೂ ಸೊತ್ತುಗಳನ್ನು ದೋಚಿಕೊಂಡು ಹೋಗಿದ್ದು ಅದೇ ರೀತಿ ಗುರುಕಂಬಳ ಪರಿಸರದಲ್ಲಿ ಒಂದು ಮನೆಯಿಂದ ಕಳ್ಳತನ ಪ್ರಕರಣವು ನಡೆದಿದೆ.

ಸರಣಿ ಕಳ್ಳತನ ಪ್ರಕರಣದಿಂದ ಪರಿಸರದ ಜನರು ಭಯಭೀತ ರಾಗಿದ್ದು ಒಂಟಿ ಮಹಿಳೆ ಮತ್ತು ಮಕ್ಕಳು ಇರುವ ಮನೆಗಳಲ್ಲಿ ರಾತ್ರಿ ಹೊತ್ತು ಮನೆ ಮಂದಿ ಆತಂಕದಲ್ಲಿ ಇದ್ದಾರೆ, ಇದೇ ಪರಿಸರದಲ್ಲಿ ಕಳ್ಳತನ ಪ್ರಕರಣ ಹತೋಟಿಗೆ ತರುಲು ಪೊಲೀಸ್ ಇಲಾಖೆ ದರೋಡೆಕೋರರನ್ನು ಮತ್ತು ಅವರ ಜಾಲವನ್ನು ಪತ್ತೆಹಚ್ಚಿ ಗರಿಷ್ಠ ಪ್ರಮಾಣದ ಶಿಕ್ಷೆಯಾಗುವಂತಹ ಸೆಕ್ಷನ್ ವಿಧಿಸಿ ಪ್ರಕರಣ ದಾಖಲಿಸಬೇಕು. ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸುವಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣವನ್ನು ಬಯಲಿಗೆಳೆಯಬೇಕು ಹಾಗೂ ರಾತ್ರಿ ಹೊತ್ತು ಗಸ್ತು ತಿರುಗುವ ಮೂಲಕ ಪರಿಸರದ ಜನತೆಗೆ ಧೈರ್ಯ ತುಂಬುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

Join Whatsapp