ತ್ರಿಪುರಾ ಹಿಂಸಾಚಾರ ವಿರೋಧಿಸಿ ಎಸ್.ಡಿ.ಪಿ.ಐ.ನಿಂದ “ತ್ರಿಪುರ ಭವನ”ಚಲೋ

Prasthutha|

ನವದೆಹಲಿ: ಈಶಾನ್ಯ ರಾಜ್ಯದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಎಸ್.ಡಿ.ಪಿ.ಐ ದೆಹಲಿ ವತಿಯಿಂದ ತ್ರಿಪುರ ಚಲೋವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.

- Advertisement -

ಮುಸ್ಲಿಮರ ಮೇಲಿನ ದಾಳಿಯನ್ನು ವಿರೋಧಿಸಿ ದೆಹಲಿಯ ಚಾಣಕ್ಯಪುರಿಯಲ್ಲಿ ಪ್ರತಿಭಟನೆ ಆಯೋಜಿಸಿದ ಎಸ್.ಡಿ.ಪಿ.ಐ, ರಾಜ್ಯ ಸರ್ಕಾರ ಪ್ರಾಯೋಜಿತ ಹಿಂಸಾಚಾರವನ್ನು ನಿಲ್ಲಿಸುವಂತೆ ಒತ್ತಾಯಿಸಿತು.

ಮಾತ್ರವಲ್ಲ ತ್ರಿಪುರಾದಲ್ಲಿ ಕಳೆದ 7 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರವನ್ನು ವಿರೋಧಿಸಿ ಎಸ್.ಡಿ.ಪಿ.ಐ ವತಿಯಿಂದ ದೇಶದೆಲ್ಲೆಡೆ ಏಕಕಾಲದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಇದರ ಭಾಗವಾಗಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.

- Advertisement -

ಮುಸ್ಲಿಮರನ್ನು ಗುರಿಯಾಗಿಸಿ ತ್ರಿಪುರಾದಲ್ಲಿ ಸಂಘಪರಿವಾರ ನಿರಂತರ ದೌರ್ಜನ್ಯ ನಡೆಸುತ್ತಿದ್ದು, ಈಗಾಗಲೇ ಮಸೀದಿ, ಮನೆಗಳು, ಅಂಗಡಿಗಳನ್ನು ಕೇಂದ್ರೀಕರಿಸಿ ದಾಳಿಯನ್ನು ಮಾಡಿ ಬೆಂಕಿಹಚ್ಚಿ, ಧ್ವಂಸಮಾಡಿ ದುಷ್ಕೃತ್ಯ ಮೆರೆದಿದೆ. ಸಂಘಪರಿವಾರ ಹ್ಯೇಯ ಕೃತ್ಯವನ್ನು ಖಂಡಿಸಿ ದೇಶದ್ಯಾಂತ ಏಕಕಾಲದಲ್ಲಿ ಪ್ರತಿಭಟನೆ ಹಮ್ಮಿಕೊಂಡು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದೆ.



Join Whatsapp