ಮಂಗಳೂರು: ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಗೀಡಾದ ಸುರತ್ಕಲ್ ಕೃಷ್ಣಾಪುರ ನಿವಾಸಿ ಜಲೀಲ್ ಅವರ ನಿವಾಸಕ್ಕೆ SDPI ರಾಷ್ಟ್ರೀಯ ನಿಯೋಗ ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿತು.
ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ನಿಯೋಗ, ಜಲೀಲ್ ಅವರ ಮರಣದಿಂದ ನಮಗೂ ದುಃಖವಾಗಿದೆ. ಆರೋಪಿಗಳ ವಿರುದ್ಧ ಕುಟುಂಬ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ಪಕ್ಷ ಕೂಡ ಬೆಂಬಲ ನೀಡಲಿದೆ, ಯಾವುದೇ ಕಾರಣಕ್ಕೂ ಎದೆಗುಂದದೆ ಹೋರಾಟ ಮುಂದುವರಿಸಬೇಕು. ಈ ಕುಟುಂಬದೊಂದಿಗೆ ಎಸ್’ಡಿಪಿಐ ಯಾವತ್ತೂ ಇರಲಿದೆ ಎಂದು ಭರವಸೆ ನೀಡಿದೆ.
ನಿಯೋಗದಲ್ಲಿ ಎಸ್’ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರಾಜ್ಯ ಸದಸ್ಯ ಸಮಿತಿ ಅಥಾವುಲ್ಲಾ ಜೋಕಟ್ಟೆ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಸಂಶಾದ್ ಅಬೂಬಕ್ಕರ್, ಪಕ್ಷದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಮಂಗಳೂರು ಉತ್ತರ ಸಭಾ ಕ್ಷೇತ್ರದ ಅಧ್ಯಕ್ಷ ಯಾಸೀನ್ ಅರ್ಕುಳ, ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಪಕ್ಷದ ಸುರತ್ಕಲ್ ಬ್ಲಾಕ್ ಅಧ್ಯಕ್ಷ ಸಲಾಂ ಕಾನ, ಅಸೆಂಬ್ಲಿ ಸಮಿತಿ ಮುಖಂಡರಾದ ನಮಾಝ್ ಚೊಕ್ಕಬೊಟ್ಟು, ಹನೀಫ್ ಕಾವೂರು, ಸ್ಥಳೀಯರು ಮುಖಂಡರು ನಾಯಕರು ಇದ್ದರು.