ಸಂಘಪರಿವಾರದಿಂದ ದಾಳಿಗೊಳಗಾದ ಹುಬ್ಬಳ್ಳಿ ಚರ್ಚ್ ಗೆ ಎಸ್ ಡಿಪಿಐ ನಿಯೋಗ ಭೇಟಿ

Prasthutha|

ಹುಬ್ಬಳ್ಳಿ: ಮತಾಂತರ ಆರೋಪ ಹೊರಿಸಿ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿದ ಹುಬ್ಬಳ್ಳಿಯ ಬೈರದೇವನ ಕೊಪ್ಪಲ್ (ನವನಗರ) ನ ಚರ್ಚ್​ಗೆ ಮಂಗಳವಾರ ಎಸ್ ಡಿಪಿಐ ನಿಯೋಗ ಭೇಟಿ ನೀಡಿ ಪರಿಶೀಲಿಸಿತು.

- Advertisement -

ನಿಯೋಗದಲ್ಲಿ ಎಸ್ ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಬ್ದುಲ್ ಲತೀಫ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯ ಅಕ್ರಂ ಹಸನ್, ಹುಬ್ಬಳ್ಳಿ ಜಿಲ್ಲಾಧ್ಯಕ್ಷರಾದ ರಫೀಕ್, ಪ್ರಧಾನ ಕಾರ್ಯದರ್ಶಿ ಇರ್ಷಾದ್ ಅತ್ತರ್ ಇದ್ದರು.

ಈ ವೇಳೆ ಮಾತನಾಡಿದ ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಕ್ರೈಸ್ತ  ಬಾಂಧವರ ಮೇಲೆ ಮತ್ತು ಚರ್ಚ್‌ನ ಮೇಲೆ ದಾಳಿ ಮಾಡಿರುವುದು ಖಂಡನೀಯ. ಚರ್ಚ್ ಒಳಗೆ ಅಕ್ರಮವಾಗಿ ಪ್ರವೇಶಿಸಿ ಪ್ರಾರ್ಥನಾ ನಿರತ ಭಕ್ತರ ಮೇಲೆ ದಾಳಿ ಮಾಡಿರುವ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

- Advertisement -

ಯಾವುದೇ ಧರ್ಮದವರು ಕೂಡ ತಮ್ಮ ಧರ್ಮ ಪ್ರಚಾರ ಮಾಡುವ, ಧರ್ಮದ ಆಚರಣೆ ಮಾಡುವ ಹಕ್ಕನ್ನು ದೇಶದ ಸಂವಿಧಾನ ಕೊಟ್ಟಿದೆ. ಸುಳ್ಳು ಮತಾಂತರದ ಆರೋಪದಲ್ಲಿ ಚರ್ಚ್ ಮೇಲೆ ದಾಳಿ ನಡೆದಿರುವುದು ಖಂಡನೀಯ. ಕಾನೂನನ್ನು ಕೈಗೆತ್ತಿಕೊಳ್ಳಲು ಸಂಘಪರಿವಾರದವರಿಗೆ ಯಾರು ಅಧಿಕಾರ ಕೊಟ್ಟವರು ಎಂದು ಪ್ರಶ್ನಿಸಿದ ಅವರು, ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.



Join Whatsapp