ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಮಸ್ಯೆಗಳ ಆಗರ: ಮುಖ್ಯಾಧಿಕಾರಿಯನ್ನು ಭೇಟಿಯಾದ SDPI ನಿಯೋಗ

Prasthutha|

ಮಂಗಳೂರು: ಬಜಪೆ ಪಂಚಾಯತ್ ಪ್ರದೇಶವು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಚಾಲ್ತಿಗೆ ಬಂದ ನಂತರ ಇಡೀ ಪಟ್ಟಣ ಪಂಚಾಯತ್ ಪ್ರದೇಶವು ಸಮಸ್ಯೆಗಳ ಆಗರವಾಗಿ ಪರಿವರ್ತನೆ ಆಗಿರುವುದನ್ನು ಮನಗಂಡ ಎಸ್ಡಿಪಿಐ ಬಜಪೆ ಪಟ್ಟಣ ಪಂಚಾಯತ್ ಸಮಿತಿ ಅಲ್ಲಿನ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿ ಪರಿಹರಿಸಲು ಮಾತುಕತೆ ನಡೆಸಿದರು.

- Advertisement -

ಚರಂಡಿಯಲ್ಲಿ ಮಳೆ ನೀರನ್ನು ಹೋಗಲು ವ್ಯವಸ್ಥೆ, ಸಮರ್ಪಕ ಕಸ ವಿಲೆವಾರಿ ಮಾಡುವಂತೆ, ಖಾತೆ ಸಮರ್ಪಕವಾಗಿ ನೀಡುವಂತೆ, ಮೂಡ ಪರವಾನಿಗೆಯನ್ನು ಪಟ್ಟಣ ಪಂಚಾಯತ್‌ನಲ್ಲಿ ನೀಡುವಂತೆ, ಕಿನ್ನಿಪದವು ಕಾಂಕ್ರೀಟ್ ರಸ್ತೆಯ ಕಳಪೆ ಕಾಮಗಾರಿಯ ಕ್ರಮದ ಬಗ್ಗೆ ಮತ್ತು ಬೀಫ್ ಸ್ಟಾಲ್ ಪುನರಾಂಬಿಸುವಂತೆ ಕೋರಿರುವ ಮಾತುಕತೆಯ ಸಾರಾಂಶವಾಗಿತ್ತು ಮತ್ತು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂಬ ಮನವಿ ಕೂಡ ನೀಡಲಾಯಿತು.

ಮನವಿಯಲ್ಲಿ ಪ್ರಮುಖವಾಗಿ

- Advertisement -

1.            ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರು ಹೋಗುವ ಚರಂಡಿಗಳು ಕಸ ಮತ್ತು ಮಣ್ಣು ತುಂಬಿಕೊಂಡು ಮಳೆ ನೀರು ಹೋಗಲು ಕಷ್ಟ ಸಾಧ್ಯವಾಗಿದೆ. ಇದರಿಂದಾಗಿ ಜನ ಸಾಮಾನ್ಯರು ರಸ್ತೆಗಳಲ್ಲಿ ನಡೆದುಕೊಂಡು ಹೋಗಲು, ಹಾಗೂ ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಗಳು ಉಂಟಾಗಿದ್ದು ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ಮತ್ತು ತುರ್ತು ಕಾಮಾಗಾರಿಯ ನೆಪದಲ್ಲಿ ಚರಂಡಿಯನ್ನು ಕಸ ಮತ್ತು ಮಣ್ಣನ್ನು ರಸ್ತೆಯ ಮೇಲೆ ಹಾಕೊಕೊಂಡು ಬೇರೆ ಕಡೆ ಸಾಗಿಸದೆ ಜನ ಸಾಮಾನ್ಯರಿಗೆ ನಡೆಯಲು ಮತ್ತು ವಾಹನ ಸಂಚಾರಕ್ಕೆ ಅಡಚಣೆ ಮಾತ್ರವಲ್ಲದೆ ಅದೇ ಕಸ ಮತ್ತು ಮಣ್ಣು ಮಳೆಗೆ ಅದೇ ಚರಂಡಿಗೆ ಪುನಃ ಬೀಳುತ್ತಿದೆ, ಇದನ್ನು ಸರಿಪಡಿಸಬೇಕು.

2.            ಸಮರ್ಪಕ ಕಸ ವಿಲೇವಾರಿ ಮಾಡುವಂತೆ : ಪಟ್ಟಣ ಪಾಚಾಯತಿಯ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ತ ನಾಗರಿಕರನ್ನು ಬಹಳಷ್ಷು ಕಾಡುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಇನ್ನಷ್ಟು ಸಾಂಕ್ರಮಿಕ ರೋಗಗಳು ಹರಡುವ ಬೀತಿ ಉಂಟಾಗಿದೆ. ವಾರದಲ್ಲಿ ಒಂದು ದಿನ ಬರುವ ವ್ಯವಸ್ಥೆಯನ್ನು ವಾರದಲ್ಲಿ ಕನಿಷ್ಠ 2 ಸಲ ಬರಬೇಕು, ಆದ್ದರಿಂದ ತಕ್ಷಣ ಸಮರ್ಪಕವಾಗಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.

3.            ಇ-ಖಾತೆಯನ್ನು ಸುಲಲಿತವಾಗಿ ನೀಡುವಂತೆ : ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೀಡುವ ಜಾಗದ ಇ-ಖಾತೆ (ಖಾತಾ) ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಸರಳೀಕರಿಸಿ ನಾಗರಿಕರಿಗೆ ಸುಲಭದಲ್ಲಿ ಸಿಗುವಂತೆ ಮಾಡಿ ನಾಗರಿಕರಿಗೆ ಆಗುವ ಅನವಶ್ಯಕ ಅಳೆದಾಟವನ್ನು ನಿಲ್ಲಿಸಬೇಕು.

4.            ಮೂಡ ಪರವಾಣಿಗೆಯನ್ನು ಪಟ್ಟಣ ಪಂಚಾಯಿತಿಯಲ್ಲಿಯೇ ನೀಡುವ ಬಗ್ಗೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಮತ್ತು ಕಟ್ಟಡ ನಿರ್ಮಾಣಕ್ಕೆ ನೀಡುವ ಪರವಾನಿಗೆಗಾಗಿ ಮೂಡ (ಮಂಗಳೂರು ನಗರ ಅಭಿವೃದ್ದಿ ಪ್ರಾಧಿಕಾರ) ಹೋಗದೆ ಪಟ್ಟಣ ಪಂಚಾಯತಿಯಲ್ಲಿ ಪರವಾನಿಗೆ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು.

ಏಕೆಂದರೆ ಪಟ್ಟಣ ಪಂಚಾಯತ್‌ನಲ್ಲಿ ಓರ್ವ ಇಂಜಿನಿಯರ್ ಇರುವ ಕಾರಣ ಪಟ್ಟಣ ಪಂಚಾಯತಿಯಲ್ಲಿಯೇ ಈ ವ್ಯವಸ್ಥೆ ಮಾಡ ಬೇಕು.

5.            ಕಿನ್ನಿಪದವು ಕಾಂಕ್ರೀಟ್ ರಸ್ತೆಯ ಕಳಪೆ ಕಾಮಗಾರಿಯ ಬಗ್ಗೆ : ಪಟ್ಟಣ ವ್ಯಾಪ್ತಿಯ ಕಿನ್ನಿಪದವು 2ನೇ ಅಡ್ಡ ರಸ್ತೆಗೆ ಗ್ರಾಮ ಪಂಚಾಯತ್ ಅನುದಾನದಲ್ಲಿ ಮಾಡಿದ ಹೊಸ ಕಾಂಕ್ರಿಟ್ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಿಂದಾಗಿ ಹಾಳಾಗಿದ್ದು ಇದನ್ನು ಸರಿಪಡಿಸ ಬೇಕು.(ಮಾಜಿ ಪಂಚಾಯತ್ ಸದಸ್ಯ ನಝೀರ್‌ರವರ ಮನೆ ಹತ್ತಿರದ ರಸ್ತೆ)

6.            ಬೀಫ್ ಸ್ಟಾಲ್ ಪುನರಾಂಭಿಸುವಂತೆ : ಪಟ್ಟನ ಪಂಚಾಯತಿನ ಮಾರುಕಟ್ಟೆಯಲ್ಲಿ ಕಾರ್ಯಚರಿಸುತ್ತಾ ಇದ್ದ ಬೀಫ್ ಸ್ಟಾಲನ್ನು ಬಂದ್ ಮಾಡಿರುತ್ತಾರೆ. ಇದರಿಂದಾಗಿ ಜನ ಸಾಮಾನ್ಯರಿಗೆ ಕಡಿಮೆ ಕ್ರಯದಲ್ಲಿ ಸಿಗುವ ಪ್ರೊಟೀನ್‌ಯುಕ್ತ ಮಾಂಸವು ಸಿಗದಂತೆ ಆಗಿದೆ ಮತ್ತು ಪಟ್ಟಣ ಪಂಚಾಯತ್ ಆದಾಯಕ್ಕೆ ಹೊಡೆತ ಬಿದ್ದಿದೆ. ಆದ್ದರಿಂದ ತಕ್ಷಣಕ್ಕೆ ಬೀಫ್ ಸ್ಟಾಲನ್ನು ತೆರೆದು ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಿಗು ಪ್ರೊಟೀನ್ ಯುಕ್ತ ಮಾಂಸವು ಸಿಗುವಂತೆ ಮಾಡಬೇಕು.

ನಿಯೋಗದಲ್ಲಿ ಎಸ್ಡಿಪಿಐ ಬಜಪೆ ಪಟ್ಟಣ ಪಂಚಾಯತ್ ಸಮಿತಿ ಅಧ್ಯಕ್ಷ ಇರ್ಷಾದ್ ಬಜಪೆ, ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಇಂಜಿನಿಯರ್,ಪಟ್ಟಣ ಪಂಚಾಯತ್ ಸಮಿತಿ ಕಾರ್ಯದರ್ಶಿ ಅನ್ವರ್, ಬ್ಲಾಕ್ ಕಾರ್ಯದರ್ಶಿ ನಝೀರ್, ಪಕ್ಷದ ಮುಖಂಡರಾದ ಸಿರಾಜ್ ರವರು  ಉಪಸ್ಥಿತರಿದ್ದರು.



Join Whatsapp