ಬಂಟ್ವಾಳ : ಎಸ್ಡಿಪಿಐ ದ. ಕ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯು ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿರವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಎಸ್ಡಿಪಿಐ ಕಛೇರಿಯಲ್ಲಿ ಇಂದು ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಬೂಬಕ್ಕರ್ ಕುಳಾಯಿ ದೇಶದಲ್ಲಿ ಜನವಿರೋಧಿ ಆಡಳಿತ ನಡೆಯುತ್ತಿದ್ದು ದಿನ ಬಳಕೆಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಬಡವರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಅದೂ ಅಲ್ಲದೇ ದೇಶದಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮೇಲೆ ಸರ್ಕಾರ ಪ್ರಾಯೋಜಿತ ದೌರ್ಜನ್ಯ ನಡೆಯುತ್ತಿದ್ದು ಜನ ಪರ್ಯಾಯ ರಾಜಕೀಯದತ್ತ ಒಲವು ತೋರಿಸುತ್ತಿದ್ದಾರೆ ಎಂದರು.
ಪ್ರಸ್ತುತ ದಿನಗಳಲ್ಲಿ ದೇಶದ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳು ನಡೆಸುತ್ತಿರುವ ಧಮನಕಾರಿ ಆಡಳಿತ ವ್ಯವಸ್ಥೆ ಮತ್ತು ತನ್ನ ವಿರೋಧಿಗಳನ್ನು ಸದೆಬಡಿಯಲು ತನಿಖಾ ಸಂಸ್ಥೆಗಳನ್ನು ದುರುಪಯೋಗ ನಡೆಸುತ್ತಿರುವ ಬಗ್ಗೆ ಸಭೆಯು ಆತಂಕ ವ್ಯಕ್ತಪಡಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆ, ಗ್ರಾಮ ಪಂಚಾಯತ್ ಉಪಚುನಾವಣೆಯ ಬಗ್ಗೆ ಸಿದ್ಧತೆ ಸೇರಿದಂತೆ,ಪಕ್ಷವನ್ನು ಬೂತ್ ಮಟ್ಟದಿಂದ ಬಲಪಡಿಸುವ ‘ನಮ್ಮ ಬೂತ್, ನಮ್ಮ ಶಕ್ತಿ” ಅಭಿಯಾನದ ಯಶಸ್ಸಿನ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನ್ವರ್ ಸಾದಾತ್ ಬಜತ್ತೂರು, ಜಮಾಲ್ ಜೋಕಟ್ಟೆ ಕಾರ್ಯದರ್ಶಿಗಳಾದ ಅಕ್ಬರ್ ಬೆಳ್ತಂಗಡಿ, ಶಾಕೀರ್ ಅಳಕೆಮಜಲು ಸೇರಿದಂತೆ ಜಿಲ್ಲಾ ಸಮಿತಿ ನಾಯಕರು, ಅಸೆಂಬ್ಲಿ ಸಮಿತಿಯ ಅದ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.