SDPI ದ‌.ಕ. ಜಿಲ್ಲಾ ನಾಯಕರಿಂದ ಮಳೆಹಾನಿ ಪ್ರದೇಶಗಳಿಗೆ ಭೇಟಿ: ಸೂಕ್ತ ಪರಿಹಾರಕ್ಕೆ ಆಗ್ರಹ

Prasthutha|

ಮಂಗಳೂರು: SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ನೇತೃತ್ವದ ನಿಯೋಗ ಮಂಗಳೂರು ತಾಲೂಕಿನ ಅಡ್ಯಾರ್, ಗುರುಪುರ, ಉಳಾಯಿಬೆಟ್ಟು, ಗ್ರಾಮಗಳಲ್ಲಿ ಇತ್ತೀಚಿಗೆ ಸುರಿದ ಮಳೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ‌ ನಡೆಸಿದೆ.

- Advertisement -

ರಸ್ತೆ ಕುಸಿತ, ಗುಡ್ಡ ಕುಸಿತ, ಕಂಪೌಂಟ್ ಕುಸಿತವಾದ ಪ್ರದೇಶಗಳಿಗೆ ಭೇಟಿ ನೀಡಿದ ನಿಯೋಗ ಸ್ಥಳೀಯರಿಂದ ಮಾಹಿತಿ ಪಡೆದು, ಸ್ಥಳೀಯ ಜನಪ್ರತಿನಿದಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾತನಾಡಿ ಸಮರ್ಪಕ ಪರಿಹಾರ ಮತ್ತು ಅಪಾಯಕಾರಿ ಪ್ರದೇಶದ ನಿವಾಸಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದೆ.

ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಮಳೆಹಾನಿಯ ನಾಶ ನಷ್ಟವನ್ನು ಕಂದಾಯ ಇಲಾಖೆ ಗಂಭೀರವಾಗಿ ಪರಿಗಣಿಸಲು ಈ ಸಂದರ್ಭ ಒತ್ತಾಯಿಸಲಾಯಿತು.

- Advertisement -

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಮಂಗಳೂರು ಉತ್ತರ ಕ್ಷೇತ್ರದ ಅಧ್ಯಕ್ಷ ಉಸ್ಮಾನ್ ಗುರುಪುರ, ಕಾರ್ಯದರ್ಶಿ ಅಝರ್ ಉಳಾಯಿಬೆಟ್ಟು, ಅಡ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಯಾಸೀನ್ ಅರ್ಕುಳ, ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಸಫರ ಗುರುಪುರ, ಪಂಚಾಯತ್ ಸದಸ್ಯರಾದ ರಿಯಾಝ್ ಎ ಕೆ, ಶಾಹಿಕ್ ಪಾಂಡೇಲ್ , ರೆಹನಾ ಹನೀಫ್, ಮನ್ಸೂರ್ ಟಿಬೆಟ್ ದಿಲ್ಶಾದ್, ಬುಶ್ರಾ, ಮಾರಿಯಮ್ಮ, ಸ್ಥಳೀಯ ಮುಖಂಡರಾದ ಇರ್ಫಾನ್ ಅಡ್ಯಾರ್, ಅಶ್ರಫ್ ಕೈಕಂಬ, ಇಮ್ತಿಯಾಝ್ ಅಡ್ಡೂರು ಉಪಸ್ಥಿತರಿದ್ದರು.



Join Whatsapp