ಹಿಜಾಬ್ ತೀರ್ಪು ವಿರೋಧಿಸಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಬಹಿಷ್ಕರಿಸಿದ ಎಸ್ ಡಿಪಿಐ ಸದಸ್ಯೆ

Prasthutha|

 ಉಪ್ಪಿನಂಗಡಿ: ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪು ವಿರೋಧಿಸಿ ಇಳಂತಿಲ ಪಂಚಾಯತ್ ಸದಸ್ಯೆ ನುಸ್ರತ್ ರಝಾಕ್ ಅವರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಬಹಿಷ್ಕರಿಸಿ, ತೀರ್ಪಿನ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು.

- Advertisement -

ಇಳಂತಿಲ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗುರುವಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಿಕಾ ಭಟ್ ನೇತೃತ್ವದಲ್ಲಿ ನಿಗದಿಯಾಗಿತ್ತು. ಸಭೆಗೆ ಎಲ್ಲಾ ಸದಸ್ಯರು ಕೂಡ ಹಾಜರಾಗಿದ್ದರು.  ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ನಿರಾಶದಾಯಕವಾಗಿದೆ. ಇದನ್ನು ಖಂಡಿಸಿ ಕರ್ನಾಟಕ ಅಮೀರೇ ಶರೀಫ್ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಆದ್ದರಿಂದ ತಾವು ಇಂದಿನ ಸಭೆಗೆ ಹಾಜರಾಗುವುದಿಲ್ಲ ಎಂದು ನುಸ್ರತ್ ರಝಾಕ್ ಹೇಳಿ, ಸಭೆಗೆ ತೆರಳದೆ ಪ್ರತಿಭಟನೆ ವ್ಯಕ್ತಪಡಿಸಿದರು.

ಇಳಂತಿಲ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 14 ಸದಸ್ಯರಿದ್ದು, ಕಾಂಗ್ರೆಸ್ 1, ಎಸ್ ಡಿಪಿಐ 1, ಬಿಜೆಪಿ 12 ಸದಸ್ಯರು ಇದ್ದಾರೆ.   13 ಮಂದಿ ಸದಸ್ಯರು ಇಂದಿನ ಸಭೆಗೆ ಹಾಜರಾಗಿದ್ದರು.



Join Whatsapp