ಫಾಶಿಸ್ಟ್ ವಿರೋಧಿ ಚಳುವಳಿಯ ಹೋರಾಟಗಾರ ಜಿ.ರಾಜಶೇಖರ್ ನಿಧನಕ್ಕೆ SDPI ಸಂತಾಪ

Prasthutha|

ಮಂಗಳೂರು : ಹಿಂದುತ್ವ ಫಾಶಿಸ್ಟ್ ವಿರೋಧಿ ಚಳುವಳಿಯ ಹಿರಿಯ ಹೋರಾಟಗಾರರೂ,ಚಿಂತಕರು,ಲೇಖಕರು,ಕೋಮು ಸೌಹಾರ್ದ ವೇದಿಕೆಯ ನಾಯಕರು ಆಗಿದ್ದ ಜಿ.ರಾಜಶೇಖರ್ ರವರ ನಿಧನಕ್ಕೆ SDPI  ದ.ಕ ಜಿಲ್ಲೆ ಸಂತಾಪ ಸೂಚಿಸಿದೆ.

- Advertisement -

ಅಲ್ಪಸಂಖ್ಯಾತ,ದಲಿತ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಮುಂಚೂಣಿ ನಾಯಕತ್ವ ನೀಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಹಲವು ಹೋರಾಟಗಳನ್ನು ಸಂಘಟಿಸಿದ ಜಿ.ರಾಜಶೇಖರ್ ರವರ ನಿಧನಕ್ಕೆ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಶೋಕ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಏನೇ ಅನ್ಯಾಯ ನಡೆದರೂ ತಕ್ಷಣ ಹೋರಾಟ ರಂಗಕ್ಕೆ ದುಮುಕಿ ಜನರನ್ನು ಸಂಘಟಿಸಿ ಪ್ರಜಾಪ್ರಭುತ್ವದ ಪರ ಮತ್ತು ಹಿಂದುತ್ವ ಫ್ಯಾಶಿಸ್ಟ್ ಸಿದ್ಧಾಂತದ ವಿರುದ್ಧ ಪ್ರಬಲ ಧ್ವನಿಯಾಗಿದ್ದವರು ಜಿ.ರಾಜಶೇಖರ್. ಫ್ಯಾಸಿಸಂ ವಿರುದ್ಧ ರಾಜಿ ರಹಿತ ಹೋರಾಟ ನಡೆಸುತ್ತಿದ್ದ ಅವರ ಅಗಲುವಿಕೆಯು ಶೋಷಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.

- Advertisement -

ಎಸ್‌ಡಿಪಿಐ ಪಕ್ಷದ ಹಿತೈಷಿಯಾಗಿದ್ದ ಅವರ ಹೋರಾಟ ಚಳುವಳಿಯು ನವ ತಲೆಮಾರಿಗೆ ಮಾದರಿಯಾಗಿರಲಿ. ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಅಬೂಬಕ್ಕರ್ ಕುಳಾಯಿ ಸಂತಾಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಪ್ರಖರ ಚಿಂತಕ ಜಿ.ರಾಜಶೇಖರ್ ಅವರ ನಿಧನಕ್ಕೆ ಇಮಾನ್ಸ್ ಕೌನ್ಸಿಲ್ ದ.ಕ. ಜಿಲ್ಲಾ ಮುಖಂಡ ಜಾಫರ್ ಫೈಝಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದಾಗ ಅದರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಿದ ಅವರು ನೈಜ ಹೋರಾಟಗಾರರಾಗಿದ್ದರು ಎಂದು ಸ್ಮರಿಸಿದ್ದಾರೆ.



Join Whatsapp