ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ಮೊದಲುಗಳನ್ನು ಸಾಧಿಸಿದ್ದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯನ್ನು ಈ ಸಮಯದಲ್ಲಿ ಗೌರವಿಸುತ್ತಿದ್ದೇವೆ. ಅವರ ಅಗಲುವಿಕೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂತಾಪ ಸೂಚಿಸುತ್ತದೆ ಎಂದು SDPI ರಾಜ್ಯಾದ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ದ್ವಾರಕೀಶ್ ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ, ಹಿರಿಯ ಕಲಾವಿದನ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಸೃಷ್ಟಿಕರ್ತನು ಅನುಗ್ರಹಿಸಲಿ ಎಂದು ಬರೆದಿದ್ದಾರೆ.