ಬಂಟ್ವಾಳ ಕ್ಷೇತ್ರಾದ್ಯಂತ SDPI ವತಿಯಿಂದ ಸಡಗರ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Prasthutha|

ಬಂಟ್ವಾಳ: ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ “ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ” ಘೋಷವಾಕ್ಯದೊಂದಿಗೆ ಧ್ವಜಾರೋಹಣ ಕಾರ್ಯಕ್ರಮ ಪಕ್ಷದ ಕ್ಷೇತ್ರ ಸಮಿತಿ ಕಛೇರಿ ಮುಂಭಾಗದಲ್ಲಿ ನಡೆಯಿತು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೂನಿಷ್ ಆಲಿ ವಹಿಸಿ ಧ್ವಜಾರೋಹಣವನ್ನು ನೆರವೇರಿಸಿದರು.

ಅತಿಥಿ ಭಾಷಣ ಮಾಡಿದ ರಾಜ್ಯ ಸಮಿತಿ ಸದಸ್ಯರಾದ ಅಕ್ಬರ್ ಅಲಿ ಪೊನ್ನೋಡಿ, ನಮ್ಮ ಪೂರ್ವಿಕರು ಕಂಡ “ಸರ್ವರಿಗೂ ಸಮಬಾಳು” “ಸರ್ವರಿಗೂ ಸಮಪಾಲು” ಕನಸನ್ನು ಇವತ್ತು ಫ್ಯಾಶಿಸ್ಟ್ ಶಕ್ತಿಗಳು ಇಲ್ಲವಾಗಿಸಲು ಪ್ರಯತ್ನಿಸುತ್ತಿದೆ, ಈ ದೇಶವನ್ನು ಧರ್ಮಗಳ ನಡುವೆ ಕಚ್ಚಾಟ ನಡೆಸಿ ಅಧಿಕಾರ ಮಾಡಲು ಫ್ಯಾಶಿಸ್ಟ್ ಪ್ರೇರಿತ ಸರಕಾರ ಪ್ರಯತ್ನಿಸುತ್ತಿದೆ. ಇಂದು ದೇಶದ ನೈಜ ದೇಶಪ್ರೇಮಿಗಳು ದೇಶದ್ರೋಹಿಗಳಾಗಿ ಚಿತ್ರಿಸಲ್ಪಡುತ್ತಿದ್ದಾರೆ, ದೇಶದ್ರೋಹಿಗಳು ದೇಶಪ್ರೇಮಿಗಳಾಗಿ ಚಿತ್ರಿಸಲ್ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ದೇಶಕ್ಕೆ ಫ್ಯಾಶಿಸ್ಟ್ ಶಕ್ತಿಗಳಿಂದ ಸ್ವಾತಂತ್ರ್ಯವನ್ನು ಮರಳಿ ಪಡೆಯಬೇಕಾಗಿದೆ ಎಂದು ಕರೆ ಕೊಟ್ಟರು.

- Advertisement -

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಮಾತನಾಡಿ ದೇಶದಾದ್ಯಂತ ಇಂದು ಫ್ಯಾಶಿಸ್ಟ್ ಸರಕಾರವನ್ನು ವಿರೋಧಿಸಿದ ಜನರು ಮತ್ತು ಸಂಘಟನೆಗಳನ್ನು ಗುರಿಪಡಿಹಲಾಗುತ್ತಿದೆ. ಅನ್ಯಾಯ ಮತ್ತು ಅಕ್ರಮಗಳು ತಾಂಡವವಾಡುತ್ತಿದೆ. ಅನೇಕ ಕ್ರೌರ್ಯಭರಿತ ಕಾನೂನುಗಳನ್ನು ತಂದು ದೇಶದ ಜನರನ್ನು ಗುರಿಪಡಿಸಲಾಗುತ್ತಿದೆ ಆದ್ದರಿಂದ ಈ ದೇಶಕ್ಕೆ ನೈಜವಾದ ಸ್ವಾತಂತ್ರ್ಯಕ್ಕಾಗಿ ಫ್ಯಾಶಿಸ್ಟ್ ಶಕ್ತಿಗಳನ್ನು ಒಟ್ಟಾಗಿ ಎದುರಿಸಬೇಕಾಗಿದೆಂದರು.

 ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಅನ್ವರ್ ಬಡಕಬೈಲ್, ಕ್ಷೇತ್ರ ಸಮಿತಿ ಸದಸ್ಯರಾದ ಶಾಹುಲ್ ಎಸ್ ಎಚ್ ಹಾಗೂ ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಮುಬಾರಕ್ ಗೂಡಿನಬಳಿ ಸ್ವಾಗತಿಸಿ ನೆರವೇರಿಸಿದರು.

ಕ್ಷೇತ್ರಾದ್ಯಂತ ಗೂಡಿನಬಳಿ, ಕೆಳಗಿನ ಪೇಟೆ, ಲೋರೆಟ್ಟೊಪದವು, ಕುಮೇರು, ತಲಪಾಡಿ, ಪರ್ಲಿಯಾ, ಗೂಡಿನಬಳಿ, ಕಾವಳಕಟ್ಟೆ, ಬೊಳಂತೂರು, ಪರ್ತಿಪ್ಪಾಡಿ, ಆಲಾಡಿ, ನಂದಾವರ, ಕಲ್ಲಡ್ಕ, ಕಲಾಯಿ, ಕರೋಪಾಡಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

Join Whatsapp