SDPI ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಪಕ್ಷ ಸಮಾವೇಶ

Prasthutha|

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಳ್ತಂಗಡಿ ಕ್ಷೇತ್ರ ಸಮಿತಿ ಪಕ್ಷ ಸಮಾವೇಶವು ಮಾ.1ರಂದು ಬೆಳ್ತಂಗಡಿ ಗುರುನಾರಾಯಣ ಭವನದಲ್ಲಿ ನಡೆಯಿತು.

- Advertisement -

ಬೆಳ್ತಂಗಡಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ನವಾಜ್ ಶರೀಫ್ ಕಟ್ಟೆ ಮಾತನಾಡಿ ಎಸ್‌ಡಿಪಿಐ ಯು ಸಂವಿಧಾನ ಬದ್ಧವಾಗಿ ಬಂದಂತಹ ಪಕ್ಷವಾಗಿದ್ದು ನಾವೆಲ್ಲರೂ ಸಕ್ರೀಯವಾಗಿ ಭಾಗವಹಿಸಬೇಕು. ಪಂಚಾಯತ್ ಚುನಾವಣೆಗಳು ಅಥವಾ ಮುಂಬರುವ ಚುನಾವಣೆಗಳಿರಬಹುದು ನಮ್ಮ ಪಕ್ಷದ ಸದಸ್ಯರುಗಳನ್ನು, ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ
ಉಪಸ್ಥಿತರಿದ್ದ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್‌ ಮಹಮ್ಮದ್ ತುಂಬೆ ಮಾತನಾಡಿ ಯಾವುದೇ ಸಾಮಾಜಿಕ ಕಾರ್ಯಕ್ರಮ, ಸಭೆಗಳಲ್ಲಿ ಅತ್ಯಂತ ಶಿಸ್ತಿನಲ್ಲಿ ಪಾಲ್ಗೊಳ್ಳುವ ಪಕ್ಷ ಎಸ್‌ಡಿಪಿಐ ಬೇರೆ ಬೇರೆ ಪಕ್ಷಗಳು ಈಗಾಗಲೇ ಚುನಾವಣಾ ತಯಾರಿ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವ ಅವನತಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಕೋಮುಗಲಭೆಗಳನ್ನು ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಕೂಡ ಮಾಡುತ್ತಿದೆ ಎಂದರು.

- Advertisement -

ವೇದಿಕೆಯಲ್ಲಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ದ, ದ.ಕ ಜಿಲ್ಲಾ ಕಾರ್ಯದರ್ಶಿ ಅಕ್ಟ‌ರ್ ಬೆಳ್ತಂಗಡಿ, ಬೆಳ್ತಂಗಡಿ ಕ್ಷೇತ್ರ ಉಪಾಧ್ಯಕ್ಷರಾದ ಇನಾಸ್ ರೋಡ್ರಿಗಸ್, ಹನೀಫ್ ಪುಂಜಾಲಕಟ್ಟೆ, ಕಾರ್ಯದರ್ಶಿಗಳಾದ ನಿಸಾರ್ ಕುದ್ರಡ್ಕ, ದ. ಕ ಜಿಲ್ಲಾ ಸದಸ್ಯೆ ಸಫ ಸಲ್ಮಾ, ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷರಾದ ಶಮಾ ಮಹಮ್ಮದ್ ಅಲಿ, ಅಸ್ಮಾ ಅಡ್ವೋಕೇಟ್, ನಸೀಮಾ ಬೆಳ್ತಂಗಡಿ ಉಪಸ್ಥಿತರಿದ್ದರು. ಅಶ್ರಫ್ ಪುಂಜಾಲಕಟ್ಟೆ ಸ್ವಾಗತಿಸಿ, ಧನ್ಯವಾದವಿತ್ತರು



Join Whatsapp