ಕೊರೋನ ವಾರಿಯರ್ಸ್ ಗಳಿಗೆ ತುರ್ತು ಕೋ ವ್ಯಾಕ್ಸೀನ್ ಮತ್ತು ಅಗತ್ಯ ವೈದ್ಯಕೀಯ ಕಿಟ್ ಕೊಡಲು ತಹಶೀಲ್ದಾರ್ ಗೆ ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಮನವಿ

Prasthutha|

ಬಂಟ್ವಾಳ : ಕೋರೋಣ ಎರಡನೇ ಅಲೆ ಮಹಾಮಾರಿ ಯಿಂದ ದೇಶವೇ ತತ್ತರಿಸುತ್ತಿರುವಾಗ ಈ ಕಠಿಣ ಸಂದರ್ಭದಲ್ಲಿ ಕೋರೋಣ ವಾರಿಯರ್ಸ್ ಆಗಿ ಆಂಬುಲೆನ್ಸ್ ಮೂಲಕ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಔಷಧಿ ಸಾಮಗ್ರಿಗಳನ್ನು ಮನೆಗೆ ತಲುಪಿಸುವುದು ಶವಗಳನ್ನು ಎಲ್ಲಾ ಧರ್ಮದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುವುದು ಹಾಗೂ ಅನೇಕ ಕೆಲಸ ಕಾರ್ಯಗಳನ್ನು ತಮ್ಮ ಜೀವವನ್ನೇ ಲೆಕ್ಕಿಸದೆ ಮುಂಚೂಣಿಯಲ್ಲಿ ನಿಂತು ಜನಸೇವೆ ದೇವರ ಸೇವೆ ಎಂದು ಪರಿಗಣಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಮಾಡುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ,ಎಸ್ ಕೆ ಎಸ್ ಎಸ್ ಫ್ ವಿಖಾಯ ತಂಡ .ಎಸ್ಎಸ್ಎಫ್ ಸಹಾಯ ತಂಡ .ಜಮಾತೆ ಇಸ್ಲಾಂನ HIF ಮತ್ತು ಮಹಿಳೆಯರ NWF ತಂಡ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಕಾರ್ಯಕರ್ತರು ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಜಗತ್ ಜಾಹೀರಾಗಿದೆ ಇವೆಲ್ಲವನ್ನೂ ಪರಿಗಣಿಸಿ ಸರಕಾರದಿಂದ ಕೊಡುವಂತ ಕೋವಾಕ್ಸಿ ನನ್ನು ಯಾವುದೇ ಶುಲ್ಕವನ್ನು ವಿಧಿಸದೆ ಈ ಪಕ್ಷ ಸಂಘ-ಸಂಸ್ಥೆಗಳ ವಾರಿಯರ್ಸ್ ಗಳಿಗೆ ಮೊಟ್ಟ ಮೊದಲನೆಯದಾಗಿ ಆದ್ಯತೆ ನೀಡಬೇಕೆಂದು ಮತ್ತು ಈ ಸಂದರ್ಭದಲ್ಲಿ ಉಪಯೋಗ ವಾಗುವ ಅಗತ್ಯ ವೈದ್ಯಕೀಯ ಕಿಟ್ ನೀಡಬೇಕೆಂದು ತಾಲೂಕು ದಂಡಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

- Advertisement -

ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಅಲಡ್ಕ ಕ್ಷೇತ್ರ ಉಪಾಧ್ಯಕ್ಷರಾದ ಉಬೈದ್ ಬಂಟ್ವಾಳ, ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ, ಜೊತೆ ಕಾರ್ಯದರ್ಶಿ ಸಲೀಂ ಆಲಾಡಿ ಉಪಸ್ಥಿತರಿದ್ದರು.

Join Whatsapp