ಹಾಸನ ಜಿಲ್ಲೆಯ ವಕ್ಫ್ ಆಸ್ತಿ ಸರ್ವೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ವಕ್ಫ್ ಮಂಡಳಿ ಅಧ್ಯಕ್ಷರಿಗೆ SDPI ಮನವಿ

Prasthutha|

ಹಾಸನ: ಹಾಸನ ಜಿಲ್ಲಾ ವಕ್ಫ್ ವತಿಯಿಂದ ಹಮ್ಮಿಕೊಂಡಿದ್ದ ಮುತವಲ್ಲಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಅವರಿಗೆ ಹಾಸನ ಜಿಲ್ಲೆಯ ವಕ್ಫ್ ಆಸ್ತಿ ಸರ್ವೆ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.

- Advertisement -


ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಅವರಿಗೆ ಹಾಸನ ಜಿಲ್ಲೆಯ ಕುಂದು ಕೊರತೆಗಳನ್ನು ವಿವರಿಸಲಾಯಿತು.


ವಕ್ಫ್ ಗೆ ಸಂಬಂಧಿಸಿದಂತ ಜಮೀನಿಗೆ ಸರ್ವೇ ಕಾರ್ಯ ನಡೆಯದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸ ಲಾಗುವುದು ಎಂದು ಎಸ್’ಡಿಪಿಐ ಇದೇ ವೇಳೆ ಎಚ್ಚರಿಕೆ ನೀಡಿತು.
ಹೊಸ ಈದ್ಗಾದ 2:30 ಎಕರೆ 80 ಫೀಟ್ ಜಾಗವನ್ನು ರಸ್ತೆಗೆ ಅಕ್ರಮಿಸಿದ ಸಂದರ್ಭದಲ್ಲಿ ಈದ್ ಘಾ ಮುಂದೆ ಹಾದು ಹೋಗುವ ವರ್ತುಲ ರಸ್ತೆಯಲ್ಲಿ ಆರು ದಿನಗಳ ನಿರಂತರ ಪ್ರತಿಭಟನೆ ನಡೆಸಲಾಯಿತು. ಹೋರಾಟದ ಫಲವಾಗಿ ಆಗಿನ ಜಿಲ್ಲಾಧಿಕಾರಿಗಳಾದ ಅಕ್ರಮ್ ಪಾಶಾ ಅವರು ಪರ್ಯಾಯವಾಗಿ ಬೇರೊಂದು ಕಡೆ ಜಮೀನನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೆ ಎಲ್ಲೂ ಸಹ ಜಮೀನನ್ನು ನೀಡಲಿಲ್ಲ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಸ್’ಡಿಪಿಐ ಎಚ್ಚರಿಸಿತು.
ಹಾಸನದ ಖಬರ್ ಸ್ತಾನಗಳಲ್ಲಿ ಮೃತ ದೇಹಗಳನ್ನು ಅಂತ್ಯಸಂಸ್ಕಾರ ನೆರವೇರಿಸಲು ಜಾಗ ಇಲ್ಲದೆ ಒಂದು ಖಬರ್’ನ ಮೇಲೆ ಮತ್ತೊಂದು ಖಬ್ರ್ ತೆಗೆಲಾಗುತ್ತಿದೆ. ಇದು ಒಂದು ರೀತಿಯಲ್ಲಿ ಮೃತಪಟ್ಟವರ ಕುಟುಂಬದವರ ಮನಸು ನೋವಿಸುವ ವಿಷಯವಾಗಿದೆ. ಆದ್ದರಿಂದ ಜಿಲ್ಲಾ ವಕ್ಫ್ ಬೋರ್ಡ್ ತನ್ನ ಅಧಿಕಾರದ ಅವಧಿಯಲ್ಲಿ ಬೇರೆ ಜಾಗದಲ್ಲಿ ಹೊಸದಾಗಿ ಖಬ್ರ್ ಸ್ಥಾನ ಜಾಗವನ್ನು ನೀಡಬೇಕೆಂದು ಶಾಫಿ ಸಅದಿ ಅವರಿಗೆ ಮನವಿ ನೀಡಲಾಯಿತು.

- Advertisement -


ಹೊಸ ಈದ್ಗಾಗೆ ಸಂಬಂದಿಸಿದ ಜಮೀನಿನಲ್ಲಿ ಕೆಲವರು ಕಬಳಿಕೆ ಮಾಡಿದ್ದು ಸರ್ವೇ ನಡೆಸಿ ಕಟ್ಟಿರುವ ಅಧಿಕೃತ ನಿವೇಶನಗಳನ್ನು ತೆರವು ಗೊಳಿಸುವಂತೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಎಲ್ಲಾ ಬೋರ್ಡ್ ನ ಆಸ್ತಿಗಳ ದಾಖಲೆಗಳನ್ನು ಸರಿಪಡಿಸಬೇಕೆಂದು ಮನವಿ ಮಾಡಿದ ಮುಖಂಡರು, ಜಿಲ್ಲಾ ವಕ್ಫ್ ಮಂಡಳಿ ಕ್ರಮ ಕೈಗೊಳ್ಳದಿದ್ದರೆ ವಕ್ಫ್ ಮಂಡಳಿ ಕಚೇರಿಗೆ ಬೀಗ ಜಡಿದು ಎಸ್ ಡಿ ಪಿ ಐ ಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್ ಹಾಗೂ ಜಿಲ್ಲಾ ಮಾಧ್ಯಮ ಉಸ್ತುವಾರಿ ಫೈರೊಜ್ ಪಾಷಾ ಜಿಲ್ಲೆಯ ಮಸೀದಿಗಳ ಮುತವಲಿಗಳು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಎಸ್’ಡಿಪಿಐ ಜಿಲ್ಲಾ ಸಮಿತಿಯಿಂದ ವಕ್ಫ್ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು.

Join Whatsapp