ಅಮೆಮ್ಮಾರ್ ಸರಕಾರಿ ಬಾವಿಯನ್ನು ದುರಸ್ಥಿಗೊಳಿಸಲು ಆಗ್ರಹಿಸಿ ಪುದು ಗ್ರಾಮ ಪಂಚಾಯತ್‌ಗೆ SDPI ಮನವಿ

Prasthutha|

ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೆಮ್ಮಾರ್ ನಲ್ಲಿ ಸಾರ್ವಜನಿಕರು ಉಪಯೋಗಿಸುತ್ತಿದ್ದಂತಹ ಸರಕಾರಿ ಬಾವಿ ಮಲಿನಗೊಂಡು ಉಪಯೋಗ ರಹಿತವಾಗಿದ್ದು ಈ ಬಾವಿಯನ್ನು ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿ ಉಪಯೋಗವಾಗುವಂತೆ ಮಾಡಬೇಕೆಂದು ಆಗ್ರಹಿಸಿ ಪುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ SDPI ನಿಯೋಗವೊಂದು ಮನವಿ ಸಲ್ಲಿಸಿತು.

- Advertisement -


ಈ ಬಾವಿಯ ಸುತ್ತಮುತ್ತಲು ಹಲವಾರು ಕುಟುಂಬಗಳು ವಾಸಿಸುತ್ತಿದ್ದು ಸಮಯದ ಮಿತಿಯಲ್ಲಿ ಬರುವ ನಳ್ಳಿ ನೀರು ಸಾಕಾಗಾದೆ ಕಡು ಬೇಸಿಗೆಯ ಈ ಸಂದರ್ಭದಲ್ಲಿ ನೀರಿಗಾಗಿ ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ ಈ ನಿಟ್ಟಿನಲ್ಲಿ ನೀರಿಗಾಗಿ ಹಾಹಾಕಾರದಿಂದಿರುವ ಇಲ್ಲಿನ ನಿವಾಸಿಗಳಿಗೆ ಮಲಿನಗೊಂಡ ಈ ಸರಕಾರಿ ಬಾವಿಯನ್ನು ದುರಸ್ಥಿಗೊಳಿಸಿ ಉಪಯೋಗವಾಗುವಂತೆ ಮಾಡಬೇಕೆಂದು ನಿಯೋಗ ಆಗ್ರಹಿಸಿತು. ಈ ಸಂದರ್ಭದಲ್ಲಿ ಹಮೀದ್, ಮುಸ್ತಫಾ, ಶರಫುದ್ದೀನ್ ಇದ್ದಿ, ತೌಸೀಫ್, ಶರಫುದ್ದೀನ್ ತಾತು ನಿಯೋಗದಲ್ಲಿದ್ದರು.

Join Whatsapp