ಬೆಂಗಳೂರು: ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ವೀಡಿಯೋ ಸಿ.ಡಿ ಬಹಿರಂಗವಾದ ಕಾರಣ ಕೂಡಲೇ ರಾಜೀನಾಮೆ ನೀಡಿದರೆ ಸಾಲದು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಅವರ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಸೆಕ್ರೆಟರಿಯೆಟ್ ಸದಸ್ಯರಾದ ಅಬ್ದುಲ್ ಜಲೀಲ್ ಕ್ರಷ್ಣಾಪುರ ಆಗ್ರಹಿಸಿದ್ದಾರೆ.
ಜನ ಪ್ರತಿನಿಧಿಗಳು ಶುದ್ದ ಚಾರಿತ್ರ್ಯ ಹೊಂದಿರಬೇಕು. ಹಿರಿಯ ರಾಜಕಾರಣಿ ಮತ್ತು ಸೆಕ್ಯುಲರ್ ಮತಗಳನ್ನು ಪಡೆದು ಪಕ್ಷ ವಿರೋಧಿ ಚಟುವಟಿಕೆ ಮಾಡಿ ಆಪರೇಶನ್ ಕಮಲದ ಮುಖ್ಯ ರೂವಾರಿಯಾಗಿದ್ದಾರೆ ರಮೇಶ್ ಜಾರಕಿಹೋಳಿ .ರಾಜ್ಯದಲ್ಲಿ ಬಿ.ಜೆ.ಪಿ ಸರಕಾರ ಬಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಲು ಪ್ರಮುಖ ಕಾರಣಕರ್ತರಾಗಿದ್ದರು. ಸೆಕ್ಸ್ ಹಗರಣದಲ್ಲಿ ಸಿಕ್ಕಿ ಬಿದ್ದ ಈ ನಾಯಕನನ್ನು ರಕ್ಷಿಸುವ ಕಾರ್ಯ ಬಿ.ಜೆ.ಪಿ ಮಾಡಬಾರದು. ಅವರು ರಾಜೀನಾಮೆ ನೀಡದಿದ್ದರೆ ಕೂಡಲೇ ವಜಾ ಮಾಡಬೇಕು.ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿ ಉಗ್ರ ಶಿಕ್ಷೆ ನೀಡಬೇಕು. ರಾಜಕಾರಣಿಗಳು ವಿಶೇಷವಾಗಿ ಬಿ.ಜೆ.ಪಿ ಮುಖಂಡರ ಸೆಕ್ಸ್ ಹಗರಣಗಳು ಆಗಾಗ ಬಹಿರಂಗವಾಗುತ್ತಿದೆ.ಇದರಿಂದ ಬಿ.ಜೆ.ಪಿ ಕೇವಲ ಭ್ರಷ್ಟಾಚಾರಿ ಮತ್ತು ಕೋಮುವಾದಿ ಪಕ್ಷ ಮಾತ್ರವಲ್ಲದೆ ಅಲ್ಲಿ ನೈತಿಕತೆಯೂ ದುರ್ಬಲವಾಗಿದೆ ಎಂದು ಎಸ್.ಡಿ.ಪಿ.ಐ ಆರೋಪಿಸಿದೆ