ಪುತ್ತೂರು: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ KSRTC ಬಸ್| ಪ್ರಾಣಾಪಾಯದಿಂದ ಪಾರಾದ ಸವಾರ

Prasthutha|

ಪುತ್ತೂರು: ದ್ವಿಚಕ್ರ ವಾಹನಕ್ಕೆ KSRTC ಬಸ್ ಡಿಕ್ಕಿ ಹೊಡೆದ ಘಟನೆ ಮಂಜಲ್ಪಡ್ಪು ಬೈಪಾಸ್ ಜಂಕ್ಷನ್ ಬಳಿ ಇಂದು (ಭಾನುವಾರ) ಮಧ್ಯಾಹ್ನ ನಡೆದಿದೆ.

- Advertisement -

ಬಸ್ಸು ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು. ಎದುರಿನಿಂದ ವೇಗವಾಗಿ ಬಂದ ಡಿಯೋ ದ್ವಿಚಕ್ರ ವಾಹನ ಬಸ್ಸಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಡಿಕ್ಕಿಯಾದ ರಭಸಕ್ಕೆ ಸ್ಕೂಟರ್ ಬಸ್ಸಿನ ಮುಂಭಾಗದಲ್ಲಿ ಸಿಲುಕಿಕೊಂಡಿದ್ದು, ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.



Join Whatsapp