ವಿಜ್ಞಾನಿ ಎಸ್ ಸೋಮನಾಥ್ ಇಸ್ರೋ ನೂತನ ಮುಖ್ಯಸ್ಥ

Prasthutha|

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ನೂತನ ಮುಖ್ಯಸ್ಥ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ರಾಕೆಟ್ ವಿಜ್ಞಾನಿಯಾದ ಎಸ್. ಸೋಮನಾಥ್ ಅವರನ್ನು ನೇಮಿಸಲಾಗಿದೆ. ಹಾಲಿ ಮುಖ್ಯಸ್ಥ ಕೆ. ಶಿವನ್ ಅವರ ಅಧಿಕಾರಾವಧಿ ಜನವರಿ 14,2022 ರಂದು ಕೊನೆಗೊಳ್ಳಲಿದೆ. ಎಸ್. ಸೋಮನಾಥ್ ಅವರು ಜನವರಿ 2018 ರಿಂದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ (VSSC)ದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ( IISc) ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ ಸೋಮನಾಥ್. ಕೊಲ್ಲಂನ TKM ಕಾಲೇಜ್ ಆಫ್ ಇಂಜಿನಿಯರಿಂಗ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವೀಧರರಾಗಿದ್ದರು ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಿಂದ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದರು, ಅವರು 1985 ರಲ್ಲಿ VSSC ಗೆ ಸೇರಿದರು. ಅವರು ಜೂನ್ 2010 ರಿಂದ 2014 ರವರೆಗೆ GSLV Mk-III ನ ಯೋಜನಾ ನಿರ್ದೇಶಕರಾಗಿದ್ದರು. ಅವರು VSSC ಯಲ್ಲಿನ ‘ಸ್ಟ್ರಕ್ಚರ್ಸ್’ ಘಟಕದ ಉಪ ನಿರ್ದೇಶಕರಾಗಿದ್ದರು ಮತ್ತು ನವೆಂಬರ್ 2014 ರವರೆಗೆ VSSC ಯಲ್ಲಿ ‘ಪ್ರೊಪಲ್ಷನ್ ಮತ್ತು ಸ್ಪೇಸ್ ಆರ್ಡಿನೆನ್ಸ್ ಎಂಟಿಟಿ’ ಉಪ ನಿರ್ದೇಶಕರಾಗಿದ್ದರು.

ಜೂನ್ 2015 ರಲ್ಲಿ ಸೋಮನಾಥ್ ಅವರು ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC), ತಿರುವನಂತಪುರಂನ ನಿರ್ದೇಶಕರಾಗಿ ನೇಮಕಗೊಂಡರು.



Join Whatsapp