ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯ ಸಮಸ್ಯೆ ಮುಂದುವರೆದಿದ್ದು, ಇಂದೂ ದಟ್ಟವಾದ ಮತ್ತು ಕಪ್ಪು ಹೊಗೆ ರಾಜಧಾನಿಯ ವಾತಾವರಣವನ್ನು ಆವರಿಸಿದೆ. ನವೆಂಬರ್ 10ರ ತನಕ 5ನೇ ತರಗತಿವರೆಗಿನ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ.
ದೆಹಲಿಯ ಸರ್ಕಾರ ವಾಯು ಮಾಲಿನ್ಯದ ಗುಣಮಟ್ಟ ಸುಧಾರಿಸಲ ಹಕವು ಕ್ರಮ ಕೈಗೊಂಡಿವೆ. ವಿದ್ಯಾರ್ಥಿಗಳ ಆರೋಗ್ಯದ ಕುರಿತೂ ಕ್ರಮ ಕೈಗೊಳ್ಳಲಾಗುತ್ತಿದೆ. 6 ರಿಂದ 12ನೇ ತರಗತಿ ತನಕ ಶಾಲೆಗಳನ್ನು ಮುಚ್ಚುವ ಅಗತ್ಯವಿಲ್ಲ. ಆದರೆ ಅವರಿಗೆ ಆನ್‌ಲೈನ್ ಕ್ಲಾಸ್ ನಡೆಸುವ ಆಯ್ಕೆಯನ್ನು ಸಹ ದೆಹಲಿ ಸರ್ಕಾರ ನೀಡಿದೆ.
Delhi Air Pollution: ಅಪಾಯಕಾರಿ ಹಂತ ತಲುಪಿದ ದೆಹಲಿ ಗಾಳಿ ಗುಣಮಟ್ಟ, GRAPಯ ಹಂತ-3 ಜಾರಿ
ಈ ಮೊದಲು ದೆಹಲಿ ಸರ್ಕಾರ ನವೆಂಬರ್ 5 ರ ತನಕ 1-5ನೇ ತರಗತಿ ಶಾಲೆಗಳು ಮುಚ್ಚಿರಲಿವೆ ಎಂದು ಹೇಳಿತ್ತು. ಆದರೆ ವಾಯು ಮಾಲಿನ್ಯ ಪರಿಸ್ಥಿತಿ ಸುಧಾರಣೆ ಕಾಣದ ಕಾರಣ ನವೆಂಬರ್ 10ರ ತನಕ 1-5ನೇ ತರಗತಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
Mumbai Air Quality: ವಾಯು ಮಾಲಿನ್ಯದಲ್ಲಿ ‘ದೆಹಲಿ’