ಮೆರವಣಿಗೆ ವೇಳೆ ಕಲ್ಲು ತೂರಾಟ: ಶಾಲಾ – ಕಾಲೇಜು ಬಂದ್, ಇಂಟರ್ನೆಟ್ ಸೇವೆ ಸ್ಥಗಿತ!

Prasthutha|

ಚಂಡೀಗಢ: ಹರಿಯಾಣದ ಮೇವತ್ ಪ್ರದೇಶದ ನಂದ್ ಗ್ರಾಮ್ ನಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಗಲಭೆ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿದೆ.

- Advertisement -


ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು 5 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಲ್ಲದೇ ಆಗಸ್ಟ್ 2 ರವರೆಗೆ ಈ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ದೊಡ್ಡ ದೊಡ್ಡ ಸಭೆಗಳನ್ನು ನಡೆಸದಂತೆ ನಿಷೇಧಾಜ್ಞೆಗಳನ್ನು ಕೂಡ ಹೊರಡಿಸಲಾಗಿದೆ.

ಘರ್ಷಣೆಯಿಂದ ಇಬ್ಬರು ಹೋಮ್ ಗಾರ್ಡ್ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಶಾಲಾ – ಕಾಲೇಜುಗಳಿಗೆ ರಜೆ ಸೇರಿದಂತೆ ಹರಿಯಾಣದಾದ್ಯಂತ ಆಗಸ್ಟ್ 1 ಮತ್ತು 2 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಉದ್ರಿಕ್ತ ಗುಂಪೊಂದು ಕಲ್ಲು ತೂರಾಟ ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದೆ. ನುಹ್ ಜಿಲ್ಲೆಯಾದ್ಯಂತ ಎಂಟು ಅರೆಸೈನಿಕ ಬೆಟಾಲಿಯನ್ಗಳನ್ನು ನಿಯೋಜಿಸಲಾಗಿದೆ ಎಂದು ನುಹ್ ಡೆಪ್ಯುಟಿ ಕಮಿಷನರ್ ಪ್ರಶಾಂತ್ ಪನ್ವಾರ್ ಹೇಳಿದ್ದಾರೆ.

Join Whatsapp