ಶಾಲಾ ಪಠ್ಯ ಪರಿಷ್ಕರಣೆ: ಮಕ್ಕಳಿಗೆ ಪರ್ಯಾಯ ಪಠ್ಯ ಪುಸ್ತಕ: ದೇವನೂರು ಮಹಾದೇವ

Prasthutha|

ಮೈಸೂರು: ಆರೆಸ್ಸೆಸ್ ಪ್ರೇರಿತ ಬಿಜೆಪಿ ಸರ್ಕಾರ ಶಾಲಾ ಮಕ್ಕಳಿಗೆ ಏನಾದರೂ ಕಲಿಸಲಿ. ಆದರೆ ನಾವು ಇದಕ್ಕೆ ಪರ್ಯಾಯವಾಗಿ ಸಂವಿಧಾನದ ಪೀಠಿಕೆ, ಆಶಯ ಸೇರಿದಂತೆ ಇನ್ನಿತರ ವಿಚಾರಗಳನ್ನು ತಿಳಿಯಪಡಿಸುವ ಕಾರ್ಯ ಮಾಡುತ್ತೇವೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆಯಿಂದ ಆಗಿರುವ ತಪ್ಪುಗಳನ್ನು ತಿದ್ದಲು ಮಕ್ಕಳು ಪ್ರಜಾಸತ್ತಾತ್ಮಕವಾಗಿ ಬೆಳೆಯಲು ಸಂವಿಧಾನದ ಆಶಯಗಳನ್ನು ಅಧ್ಯಯನ ನಡೆಸಲು ಪರ್ಯಾಯವಾಗಿ ಕಾರ್ಯಕ್ರಮ ರೂಪಿಸಲಾಗುವುದು. ಸದ್ಯ ಮಕ್ಕಳು ಬಳಸುವ ಸಾಮಾಜಿಕ ಜಾಲತಾಣಗಳ ಮೂಲಕ ಪಠ್ಯ ಪರಿಷ್ಕರಣೆಯಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸಲಾಗುವುದು. ತಜ್ಞರ ನೆರವು ಪಡೆದು ಉಪನ್ಯಾಸ ವ್ಯವಸ್ಥೆಗೊಳಿಸುತ್ತೇವೆ. ಕಮ್ಮಟ ಮಾಡಿ ಪ್ರಶ್ನಿಸುವ, ಮನೋಭಾವ ಬೆಳೆಸಲಿದ್ದೇವೆ ಎಂದು ತಿಳಿಸಿದ್ದಾರೆ.

ಸರ್ಕಾರದ ನಿಲುವನ್ನು ವಿರೋಧಿಸಿದ ತನ್ನ ಪಠ್ಯವನ್ನು ಕೈ ಬಿಡಲು ಸೂಚಿಸಿದ್ದೇನೆ. ಪಠ್ಯ ಪುಸ್ತಕ ಇದೀಗ ಮಕ್ಕಳ ಕೈ ಸೇರಿದ್ದರೆ ಬೋಧಿಸುವಂತೆ ಶಿಕ್ಷಕರಿಗೆ ಸೂಚಿಸಬೇಕು ಎಂದು ತಿಳಿಸಿದ್ದಾರೆ.



Join Whatsapp