ಶಾಲಾ ಬಸ್ ಪಲ್ಟಿ; ಮಹಿಳಾ ಸಿಬ್ಬಂದಿ ಮೃತ್ಯು

Prasthutha|

ಶಿರಸಿ: ಖಾಸಗಿ ಶಾಲೆಯ ಬಸ್ ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಬುಗುಡಿಕೊಪ್ಪ ಸಮೀಪ ನಡೆದಿದೆ.

- Advertisement -

ರಾಣೆಬೆನ್ನೂರಿನ ಪರಿಣಿತಿ ವಿದ್ಯಾ ಮಂದಿರ ಶಾಲೆಯ ಸಿಬ್ಬಂದಿ ಕಸ್ತೂರಮ್ಮ (60) ಮೃತ ಮಹಿಳೆ. ಬಸ್ ನಲ್ಲಿ ಒಟ್ಟು 13 ಮಂದಿ ಪ್ರಯಾಣಿಕರಿದ್ದರು. ಈ ಪೈಕಿ ಒಬ್ಬರು ಮೃತಪಟ್ಟು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬನವಾಸಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp