ನಿಯಮ ಉಲ್ಲಂಘನೆ: ಶಾಲಾ ಬಸ್ ಚಾಲಕನಿಗೆ ಟ್ರಾಫಿಕ್ ಪೊಲೀಸ್ ದಂಡ

Prasthutha|

ಬೆಂಗಳೂರು: ಶಾಲಾ ಬಸ್ ಚಾಲಕ ತಪ್ಪಾದ ರೀತಿಯಲ್ಲಿ ಅಪಾಯಕಾರಿ ಬಸ್ ಯೂಟರ್ನ್ ತೆಗೆದುಕೊಂಡ ಹಿನ್ನಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.

- Advertisement -


ಜುಲೈ 19ರಂದು ನಿಯಮ ಉಲ್ಲಂಘಿಸಿದ್ದ ಚಾಲಕನ ಕೃತ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಸಾರ್ವಜನಿಕರೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಿದ್ದರು. ವಿಡಿಯೊ ಆಧರಿಸಿ ಕ್ರಮ ಜರುಗಿಸಿರುವ ಮಹದೇವಪುರ ಸಂಚಾರ ಠಾಣೆ ಪೊಲೀಸರು, ಚಾಲಕನನ್ನು ಪತ್ತೆ ಮಾಡಿ ದಂಡ ವಿಧಿಸಿದ್ದಾರೆ.


Chrysalis High ಶಾಲೆಗೆ ಸೇರಿದ ಬಸ್ ನ ಚಾಲಕ ಮಾಡಿದ ಅಚಾತುರ್ಯದ ವಿಡಿಯೋ ಅಪ್ಲೋಡ್ ಮಾಡಿ ಕ್ರಮ ಜರುಗಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರಿಗೆ ಮನವಿ ಮಾಡಲಾಗಿತ್ತು. ಬಳಿಕ ಅದೇ ರೀತಿಯಲ್ಲಿ ಬಸ್ ಮತ್ತೆ ಅಪಾಯಕಾರಿಯಾಗಿ ಯೂಟರ್ನ್ ಪಡೆಯುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿ ‘ಮತ್ತದೇ ತಪ್ಪು.. ಪೊಲೀಸರ ಕ್ರಮವೆಲ್ಲಿದೆ @blrcitytraffic ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರ ನೀಡಿರುವ ಮಹದೇವಪುರ ಸಂಚಾರಿ ಪೊಲೀಸರು ಬಸ್ ಚಾಲಕನಿಗೆ ದಂಡ ಹಾಕಲಾಗಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದ್ದಾರೆ. ಚಾಲಕನಿಗೆ ದಂಡದ ಚಲನ್ ನೀಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಪೊಲೀಸರ ತ್ವರಿತ ಪ್ರತಿಕ್ರಿಯೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -



Join Whatsapp