ಭಾರತವನ್ನು ಇಂಧನ ಹೊರಸೂಸುವಿಕೆ ಮುಕ್ತಗೊಳಿಸಲು “ಗ್ರೀನ್ ಯೋಧ” ಕಾರ್ಯಕ್ರಮ ಪರಿಚಯಿಸಿದ ಷ್ನೇಂಡರ್ ಎಲೆಕ್ಟ್ರಿಕ್ ಸಂಸ್ಥೆ

Prasthutha: November 25, 2021

ಬೆಂಗಳೂರು: ಭಾರತದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯ ಬೆನ್ನಲ್ಲೇ “ಷ್ನಿಂಡರ್ ಎಲೆಕ್ಟ್ರಿಕ್” ಸಂಸ್ಥೆಯು “ಗ್ರೀನ್ ಯೋಧ” ಎಂಬ ನೂತನ ಕಾರ್ಯಕ್ರಮವನ್ನು ಘೋಷಿಸಿದೆ.

ಗ್ರೀನ್‌ ಯೋಧ ಕಾರ್ಯಕ್ರಮದ ಮೂಲಕ ತಮ್ಮೆಲ್ಲಾ ಉದ್ಯಮದಲ್ಲಿ ಇಂಧನ ಬಳಕೆ ಪರ್ಯಾಯವಾಗಿ ವಿದ್ಯುತ್‌ ಚ್ಛಕ್ತಿ ಬಳಕೆಸುವ ಪ್ರತಿಜ್ಞೆಯನ್ನು ಷ್ನೇಂಡರ್ ಎಲೆಕ್ಟ್ರಿಕ್ ಸಂಸ್ಥೆ ಕೈಗೊಂಡಿದೆ.  ಈ ಕಾರ್ಯಕ್ರಮಕ್ಕೆ ಜಿ.ಕೆ. ಸಿಮೆಂಟ್ ಹಾಗೂ ಯುಎಸ್‌ಟಿ ಸಂಸ್ಥೆಯು ಸಹ ಕೈ ಜೋಡಿಸಿದೆ.

ಈ ಕುರಿತು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಪ್ರತಿಯೊಬ್ಬರು ಪರಿಸರ ಸ್ನೇಹಿ ಉಪಕ್ರಮಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ದೇಶದಲ್ಲಿ ಕಲ್ಲಿದ್ದಲು ಹಾಗೂ ಇಂಧನ ಬಳಕೆ ಹೆಚ್ಚಾಗಿದ್ದಯ, ಇದರಿಂದ ಇಂಧನ ಹೊರಸೂಸುವಿಕೆಯಲ್ಲಿ ಭಾರತ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿರುವುದು ಆಘಾತಕಾರಿ. 2030ರ ಒಳಗಾಗಿ ಭಾರತದಲ್ಲಿ 1 ಬಿಲಿಯನ್ ಟನ್‌ನಷ್ಟು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕು. ಹೀಗಾಗಿ ಉಕ್ಕು, ಸಿಮೆಂಟ್, ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಗಳು ಇಂಧನ ಬಳಕೆ ಮಾಡುವ ಬದಲು ಎಲೆಕ್ಟ್ರಿಕ್ ಬಳಕೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಷ್ನೇಡರ್ ಎಲೆಕ್ಟ್ರಿಕ್ ಇಂಡಿಯಾದ ಸಿಇಒ ಅನಿಲ್‌ ಚೌಧರಿ,  ಪ್ರಧಾನಿಯವರ ಘೋಷಣೆಯ ಭಾಗವಾಗಿ ನಮ್ಮ ಷ್ನಿಂಡರ್ ಎಲೆಕ್ಟ್ರಿಕ್ ಗ್ರೀನ್‌ ಯೋಧ ಎಂಬ ಕಾರ್ಯಕ್ರವನ್ನು ಘೋಷಿಸಿದೆ. ಈ ಮೂಲಕ ಇಂಧನವನ್ನು ಹೆಚ್ಚು ಬಳಸುವ ಸಂಸ್ಥೆಗಳನ್ನು ಎಲೆಕ್ಟ್ರಿಕ್ ಉತ್ಪನ್ನದತ್ತ ತೆಗೆದುಕೊಂಡು ಹೋಗಲಿದ್ದೇವೆ ಎಂದರು.

ಗ್ರೀನ್‌ಯೋಧ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿದ ಜಿಕೆ ಸಿಮೆಂಟ್ ಲಿಮಿಟೆಡ್‌ನ ಎಂಡಿ ಮಾಧವ್ ಸಿಂಘಾನಿಯಾ, ಸಿಮೆಂಟ್ ಉತ್ಪಾದನೆಗೆ ಬಳಸುವ ಇಂಧನವನ್ನು ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಮೊರೆ ಹೋಗುವ ಗುರಿ ಹೊಂದಿದ್ದೇವೆ. ಈಗಾಗಲೇ 465ಕೆಜಿ ಇಂಧನ ಹೊರಸೂಸುವಿಕೆಯನ್ನು ನಿಂತ್ರಿಸುವ ಮೂಲಕ ವಿದ್ಯುತ್‌ ಚ್ಛಕ್ತಿ ಬಳಸುತ್ತಿದ್ದೇವೆ ಎಂದರು.

ಯುಎಸ್‌ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸಾಂಡರ್ ವರ್ಗೀಸ್ ಮಾತನಾಡಿ,  ಯುಎಸ್‌ಟಿ ಈಗಾಗಲೇ ಗ್ರೀನ್‌ಯೋಧ ಉಪಕ್ರಮವನ್ನು ಅಳವಡಿಸಿಕೊಂಡಿದೆ. 2025ರ ವೇಳೆ ಗ್ರಾಹಕರಿಗೆ 800ಎಂ ಮೆಟ್ರಿಕ್ ಟನ್ ಇಂಧನ ಹೊರಸೂಸುವಿಕೆಯನ್ನು ನಿಯಂತ್ರಿಸುವುದು ನಮ್ಮ ಗುರಿಯಾಗಿದೆ ಎಂದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!