6 ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ‘ಉಪ ಚುನಾವಣೆ’ ವೇಳಾಪಟ್ಟಿ ಪ್ರಕಟ

Prasthutha|

ನವದೆಹಲಿ: ಕೇಂದ್ರ ಚುನಾವಣಾ ಆಯೋಗದಿಂದ 6 ರಾಜ್ಯಗಳ ವಿಧಾನಸಭಾ ಉಪ ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ. ಮೇ.30ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಜೂನ್ 23ರಂದು ಮತದಾನ ನಡೆಯಲಿದೆ.

- Advertisement -

ಈ ಕುರಿತು ಚುನಾವಣಾ ಆಯೋಗದಿಂದ ಅಧಿಸೂಚನೆ ಹೊರಡಿಸಿದ್ದು, ಪಂಜಾಬ್ ನ ಸಂಗ್ರೂರ್, ಉತ್ತರ ಪ್ರದೇಶದ ರಾಮ್ ಪುರ್, ಅಜಾಮ್ ಘರ್, ತ್ರಿಪುರದಾ ಅಗರ್ತಲಾ, ಬದ್ರೋಲಿ ನಗರ, ಸುಮಾ, ಜುಬರ್ಜಾ ನಗರ್, ಆಂಧ್ರಪ್ರದೇಶದ ಅಟ್ಮಾಕೂರ್, ನವದೆಹಲಿಯ ರಜಿಂದೇರ್ ನಗರ್ ಹಾಗೂ ಜಾರ್ಖಡ್ ನ ಮಾಂದ್ರಗೆ ಉಪ ಚುನಾವಣೆ ಘೋಷಣೆ ಮಾಡಿದೆ.

ಮೇ.30ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಜೂನ್ 6ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಜೂನ್ 7ರಂದು ನಡೆಯಲಿದೆ. ಜೂನ್ 9 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್ 23, 2022ರಂದು ಮತದಾನ ನಡೆಯಲಿದೆ. ಜೂನ್ 26ರಂದು ಮತಏಣಿಕೆ ಕಾರ್ಯ ನಡೆಯಲಿದೆ. ಜೂನ್ 28, 2022ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.



Join Whatsapp