ಸ್ಕ್ಯಾನಿಂಗ್​ ಸೆಂಟರ್ ಸ್ಕ್ಯಾಮ್;  ಮಹಿಳೆಯರ ಬಟ್ಟೆ ಬದಲಿಸುವ ದೃಶ್ಯ  ರೆಕಾರ್ಡ್​ ಮಾಡುತ್ತಿದ್ದ ರೇಡಿಯಾಲಜಿಸ್ಟ್ ಸೆರೆ

Prasthutha|

ಕೊಚ್ಚಿ:   ಎಂಆರ್​ಐ ಸ್ಕ್ಯಾನಿಂಗ್​  ಮಾಡಿಸಲು ಬರುತ್ತಿದ್ದ ಮಹಿಳೆಯರು, ಬಟ್ಟೆ ಬದಲಾಯಿಸುವುದನ್ನು ಮೊಬೈಲ್​ ಕ್ಯಾಮೆರಾದಲ್ಲಿ ರಹಸ್ಯವಾಗಿ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಖತರ್ನಾಕ್  ರೇಡಿಯಾಲಜಿಸ್ಟ್​ ನನ್ನು ಬಂಧಿಸಲಾಗಿದೆ.

- Advertisement -

ಅಂಜಿತ್​ ಅಲಿಯಾಸ್​ ನಂದು (24) ಬಂಧಿತ ರೇಡಿಯಾಲಜಿಸ್ಟ್​. ಪತ್ತನಂತಿಟ್ಟ ಜಿಲ್ಲೆಯ ಆಡೂರ್​ ನಗರದಲ್ಲಿ ಜನರಲ್​ ಆಸ್ಪತ್ರೆ ಬಳಿ ಇರುವ ದೇವಿ ಸ್ಕ್ಯಾನಿಂಗ್​ ಸೆಂಟರ್​ನಲ್ಲಿ ಈತ ರೇಡಿಯಾಲಜಿಸ್ಟ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ.

ಏಝಾಂಕುಲಂ ನ ಮಹಿಳೆಯೊಬ್ಬರು  ನೀಡಿದ ದೂರಿನ ಆಧಾರದ ಮೇಲೆ ರಂಜಿತ್​ನನ್ನು ಬಂಧಿಸಲಾಗಿದೆ. ಈ ಸುದ್ದಿ ವೈರಲ್ ಆಗದಂತೆ ತಡೆಯಲು ಲ್ಯಾಬ್​ ಆಡಳಿತ ಮಂಡಳಿ ಸಾಕಷ್ಟು ಪ್ರಯತ್ನ ಮಾಡಿದೆ. ಮಹಿಳೆಗೆ ಹಣದ ಆಮಿಷವನ್ನು ಒಡ್ಡಿದ  ಲ್ಯಾಬ್ ಆಡಳಿತ ಮಂಡಳಿಯ ಆಮಿಷಕ್ಕೆ ಜಗ್ಗದ ಮಹಿಳೆ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿ, ಆರೋಪಿಯನ್ನು ಕಂಬಿ ಹಿಂದೆ ತಳ್ಳಿದ್ದಾಳೆ.

- Advertisement -

ಕೇವಲ ಕ್ಯಾಮೆರಾ ಮಾತ್ರ ಕಾಣುವಂತೆ ಮೊಬೈಲ್​​ಗೆ ಬಟ್ಟೆ ಸುತ್ತಿ ಕೋಣೆಯ ಕಪಾಟಿ​ನಲ್ಲಿ ಇಡುತ್ತಿದ್ದ. ಬಟ್ಟೆ ಬದಲಾಯಿಸಲು ಬಂದ ಮಹಿಳೆಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಮೊಬೈಲ್​ ಇರುವುದು ಪತ್ತೆಯಾಗಿದೆ. ತಕ್ಷಣ ರೆಕಾರ್ಡ್​ ಆಗಿರುವ ದೃಶ್ಯಗಳನ್ನು ಡಿಲೀಟ್​ ಮಾಡಿ, ಲ್ಯಾಬ್​ನಲ್ಲಿ ಜೋರು ಗಲಾಟೆ ಮಾಡಿದ್ದಾರೆ. ಈ ವೇಳೆ ಆರೋಪಿ ರಂಜಿತ್​ ಓಡಿ ಬಂದು ಮಹಿಳೆಯಿಂದ ಮೊಬೈಲ್​ ಕಿತ್ತುಕೊಂಡಿದ್ದಾನೆ. ಅಷ್ಟರಲ್ಲಿ  ಸ್ಥಳದಲ್ಲಿ ಜಮಾಯಿಸಿದ ಇತರರು ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಹಿಡಿದುಕೊಟ್ಟಿದ್ದಾರೆ.

ಮೊಬೈಲ್​ ಪಡೆದು ಪರಿಶೀಲಿಸಿದಾಗ ಮಹಿಳೆಯರ 8 ಬೆತ್ತಲೆ ವಿಡಿಯೋಗಳು ಪತ್ತೆಯಾಗಿವೆ. ಈ ಪ್ರಕರಣದ ಬಗ್ಗೆ ಮಾತನಾಡಿರುವ ಡಿವೈಎಸ್​ಪಿ ಬಿನು, ಮೊಬೈಲ್​ ಅನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ, ಇತರ ದೃಶ್ಯಗಳು ಡಿಲೀಟ್ ಆಗಿದೆಯೇ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.

ರಾಜಕೀಯ ಪಕ್ಷಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಲ್ಯಾಬ್ ಅನ್ನು ಮುಚ್ಚಲಾಗಿದೆ.



Join Whatsapp