ಪೆಗಾಸೆಸ್ ಸ್ಪೈವೇರ್ ವಿಚಾರಣೆಯನ್ನು ಆಗಸ್ಟ್ 16 ರಂದು ವಿಚಾರಣೆ ನಡೆಸುವುದರಿಂದ ಚರ್ಚೆ ನಿಲ್ಲಿಸುವಂತೆ ಪಕ್ಷಗಳಿಗೆ ಸುಪ್ರೀಮ್ ಕೋರ್ಟ್ ಸೂಚನೆ

Prasthutha|

ನವದೆಹಲಿ: ದೇಶದಾದ್ಯಂತ ರಾಜಕೀಯ ಸಂಚಲನ ಮೂಡಿಸಿದ್ದ ಪೆಗಾಸೆಸ್ ಕುರಿತ ವಿಚಾರಣೆಯನ್ನು ಕೈಗೆತ್ತಿಕೊಂಡ ಭಾರತದ ಮುಖ್ಯ ನ್ಯಾಯಾಮೂರ್ತಿ (ಸಿಜೆಇ) ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ವಿನೀತ್ ಶರಣ್, ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಆಗಸ್ಟ್ 10 ಮಂಗಳವಾರ ದಂದು ಸಂಕ್ಷಿಪ್ತವಾಗಿ ಈ ಅರ್ಜಿಯ ಕುರಿತು ಚರ್ಚಿಸಿದರು.

- Advertisement -

ಪೆಗಾಸೆಸ್ ಸ್ಪೈವೇರ್ ಬಳಸಿ ದೇಶದ ಗಣ್ಯರನ್ನು ಕಣ್ಗಾವಲು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಮ್ ಕೋರ್ಟ್ ಅನ್ನು ಸಂಪರ್ಕಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರದಿಂದ ಸೂಚನೆಗಳನ್ನು ಪಡೆಯಲು ಆಗಸ್ಟ್ 13 ಶುಕ್ರವಾರದ ವರೆಗೆ ಸಮಯಾವಕಾಶವನ್ನು ಕೋರಿದರು. ಈ ಮನವಿಗೆ ಸ್ಪಂದಿಸಿದ ಸಿಜೆಇ ರಮಣ ಅವರು ಶುಕ್ರವಾರ ಬಿಡುವಿನ ಅಲಭ್ಯತೆಯ ಕಾರಣದಿಂದ ಈ ವಿಚಾರಣೆಯನ್ನು ಆಗಸ್ಟ್ 16 ಸೋಮವಾರ ದಂದು ಕೈಗೆತ್ತಿಕೊಳ್ಳಲಿದೆಯೆಂದು ತಿಳಿಸಿದರು. ಮಾತ್ರವಲ್ಲದೇ ಈ ವಿಷಯದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಮಾನಾಂತರ ಚರ್ಚೆಯಲ್ಲಿ ತೊಡಗಿಸದಂತೆ ವಿವಿಧ ಪಕ್ಷಗಳನ್ನು ಒತ್ತಾಯಿಸಿದರು.

ಇಸ್ರೇಲ್ ಮೂಲದ ಎನ್.ಎಸ್.ಒ ಕಂಪೆನಿಯ ಪೆಗಾಸೆಸ್ ಸ್ಪೈವೇರ್ ಬಳಸಿ ಭಾರತದ 300 ಕ್ಕೂ ಮಿಕ್ಕಿದ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಸರ್ಕಾರಿ ಅಧಿಕಾರಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು, ಸಾಮಾಜಿಕ ಹೋರಾಟಗಾರರನ್ನು ಗುರಿಯಾಗಿಸಿ ಅವರ ಫೋನ್ ಗಳನ್ನು ಕಣ್ಗಾವಲಿನಲ್ಲಿಟ್ಟಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪತ್ರಕರ್ತರು ಸೇರಿದಂತೆ ಹಲವಾರು ಮಂದಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಭಾರತದ ಮಾಜಿ ನ್ಯಾಯಮೂರ್ತಿ ರಂಜನ್ ಗೊಗೊಯ್ ಸೇರಿದಂತೆ ದೇಶದ ಹಲವಾರು ಗಣ್ಯರು ಸ್ಪೈವೇರ್ ನ ಸಂಭಾವ್ಯರ ಪಟ್ಟಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಮ್ ಕೋರ್ಟ್ ನಲ್ಲಿ ಸಲ್ಲಿಸಲಾದ ಅರ್ಜಿಯ ಮುಂದಿನ ವಿಚಾರಣೆಯು ಆಗಸ್ಟ್ 16 ರಂದು ನಡೆಸಲಾಗುವುದೆಂದು ಸಿಜೆಇ ರಮಣ ಅವರು ಸ್ಪಷ್ಟಪಡಿಸಿದ್ದಾರೆ.

Join Whatsapp