ನವದೆಹಲಿ | ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮಅದನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ಪರಿಗಣಿಸಲಿದ್ದು, ಅವರನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಮಅದನಿ ಪರ ವಾದ ಮಂಡಿಸಲಿದ್ದಾರೆ.
ತಮ್ಮ ಆರೋಗ್ಯ ಹದಗೆಟ್ಟ ನಂತರ ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಮಅದನಿ ಅವರು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದರು.
ಬೆಂಗಳೂರಿನಲ್ಲಿಯೇ ಉಳಿಯಬೇಕೆಂಬ ಷರತ್ತಿನಲ್ಲಿ ಸಡಿಲಿಕೆ ನೀಡಬೇಕು ಎಂಬ ಬೇಡಿಕೆ ಇಟ್ಟು ಸಲ್ಲಿಸಲಾಗಿದ್ದ ಅರ್ಜಿಯನ್ನು ವಕೀಲ ಹಾರಿಸ್ ಬೀರಾನ್ ಅವರು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದರು. ಈ ಹಿಂದೆ ಅರ್ಜಿಯನ್ನು ಶುಕ್ರವಾರ ಪರಿಗಣಿಸಲಾಗುವುದು ಎಂದು ಘೋಷಿಸಲಾಗಿತ್ತು.
ತನ್ನ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಕೇರಳಕ್ಕೆ ತೆರಳಿ ಆಯುರ್ವೇದ ಚಿಕಿತ್ಸೆಗೆ ಒಳಗಾಗಲು ಅವಕಾಶ ನೀಡಬೇಕು ಎಂಬುದು ಮಅದನಿ ಅವರ ಬೇಡಿಕೆಯಾಗಿದೆ. ಮೆದುಳಿನ ಆಘಾತದಿಂದಾಗಿ ಅವರು ಮರೆವು ಮತ್ತು ದೃಷ್ಟಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.